ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ವಿ.ದೇವರಾಜ್ ಅವರನ್ನು ಮುಖಂಡರು ಅಭಿನಂದಿಸಿದರು. ಮಧುಕುಮಾರ್, ಕೃಷ್ಣೇಗೌಡ, ಸೋಮಯ್ಯ ಇತರರು ಇದ್ದರು.
- Norwegian Agricultural Credit Cooperative Society
ಬೇಲೂರು : ತಾಲೂಕಿನ ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ವಿ.ದೇವರಾಜ್ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರವೀಣ್ ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್.ವಿ.ದೇವರಾಜ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ ನಿಬಂಧಕ ಗುರುಮೂರ್ತಿ ಚುನಾವಣಾ ಪ್ರಕ್ರಿಯೆಗಳ ನಂತರ ಎಸ್.ವಿ.ದೇವರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನಂತರ ಎಸ್.ವಿ.ದೇವರಾಜ್ ಮಾತನಾಡಿ, ನಮ್ಮ ಸಹಕಾರ ಸಂಘಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ನಿರ್ದೇಶಕರು ಹಾಗೂ ಎಲ್ಲ ಮುಖಮಡರಿಗೂ ಧನ್ಯವಾದ ಸಲ್ಲಿಸುತ್ತೇನೆ. ಸಂಘದ ಅಭಿವೃದ್ಧಿಗಾಗಿ ನಿರ್ದೇಶಕರು, ಷೇರುದಾರರ ಸಹಕಾರದೊಂದಿಗೆ ಕೆಲಸ ಮಡುತ್ತೇನೆ ಎಂದರು.
ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮಧು ಕುಮಾರ್, ನಿರ್ದೇಶಕರಾದ ಕೃಷ್ಣೇಗೌಡ, ಸೋಮಯ್ಯ, ಚೇತನ್ ಕುಮಾರ್, ಚಂದ್ರು, ಪ್ರವೀಣ್ ಕುಮಾರ್, ಗೀತಾ, ಗೋಪಮ್ಮ, ಮುಖಂಡರಾದ ನಟರಾಜ್, ಅನಿಲ್ ಕುಮಾರ್, ತ್ಯಾಗರಾಜ್, ಪವನ್, ಶಿವಕುಮಾರ್, ಸತೀಶ್, ಶ್ರೀಕಾಂತ್, ಕಾಳೇಗೌಡ, ಸಿಬ್ಬಂದಿ ಸೇರಿದಂತೆ ಇತರರಿದ್ದರು.