ಬಿಎಸ್‌ಎನ್‌ಎಲ್ ಟವರ್ ದುರಸ್ಥಿಪಡಿಸುವಂತೆ ಕಾಗೆನಹರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
- ಕಾಗೆನಹರೆ ಗ್ರಾಮಸ್ಥರಿಂದ ಪ್ರತಿಭಟನೆ
ಸಕಲೇಶಪುರ: ತಾಲೂಕಿನ ಕಾಗೆನಹರೆ ಗ್ರಾಮಸ್ಥರಿಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದ ಕಳೆದ ಒಂದು ವಾರದಿಂದ ಹೊರ ಪ್ರಪಂಚದ ಸಂಪರ್ಕ ಇಲ್ಲದಾಗಿದೆ ಎಂದು ಆರೋಪಿಸಿ ಮೊಬೈಲ್ ಟವರ್ ಮುಂಭಾಗ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕು ಕೇಂದ್ರದಿಂದ ನಲವತ್ತು ಕಿ.ಮಿ. ದೂರದಲ್ಲಿರುವ ಕಾಗೆನಹರೆ ಗ್ರಾಮದಲ್ಲಿರುವುದು ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಮಾತ್ರ. ಪ್ರವಾಸಿ ತಾಣವಾಗಿರುವ ಕಾಗೆನಹರೆ ಗ್ರಾಮಕ್ಕೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೂ ಟವರ್‌ನಿಂದ ಸಮಸ್ಯೆಯಾಗಿದೆ. ಗ್ರಾಮದ ಸುತ್ತ ಬೆಟ್ಟಗುಡ್ಡಗಳಿಂದ ಅವೃತ್ತಗೊಂಡಿದೆ. ಆದರೆ, ಟವರ್ ಅನ್ನು ತಗ್ಗು ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದು, ಸೋಲಾರ್ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ರಾತ್ರಿ ವೇಳೆ ಟವರ್ ಸಂಪೂರ್ಣ ಸ್ತಬ್ಧಗೊಳ್ಳುತ್ತದೆ. ಇದರಿಂದ ಸ್ಥಳೀಯರಿಗೆ ತುಂಬ ಸಮಸ್ಯೆಯಾಗುತ್ತಿದೆ ಎಂದರು.
ಕಳೆದ ಹತ್ತು ದಿನಗಳಿಂದ ಸಂಪೂರ್ಣ ಕಾರ್ಯನಿರ್ವಹಣೆಯೆ ಸ್ಥಗಿತಗೊಂಡಿರುವುದರಿಂದ ಗ್ರಾಮಸ್ಥರಿಗೆ ಹೊರಪ್ರಪಂಚದ ಸಂಪರ್ಕವೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೆ ಪ್ರಯೋಜವಾಗಿಲ್ಲ ಎಂದು ದೂರಿದರು. ಈ ವೇಳೆ ಗ್ರಾಮಸ್ಥರಾದ ರಾಜಶೇಖರ್, ಧನರಾಜ್, ಹರಿಪ್ರಸಾದ್, ತುಳಸಿ, ಪ್ರಸನ್ನ, ಮೋಹನ್ ಮುಂತಾದವರಿದ್ದರು.