ಅರಸೀಕೆರೆ ತಾಲೂಕಿನ ಸುಕ್ಷೇತ್ರ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಖಜಾನೆಯಲ್ಲಿ ಇರಿಸಲಾಗಿದ್ದ ಆಭರಣಗಳನ್ನು ಬಿಗಿಭದ್ರತೆಯಲ್ಲಿ ಕ್ಷೇತ್ರಕ್ಕೆ ಕಳುಹಿಸಿಕೊಡಲಾಯಿತು. ಪಾಲಾಕ್ಷ, ಗಿರೀಶ್, ಶಿವಶಂಕರ್, ಲೋಕೇಶಯ್ಯ ಇತರರು ಇದ್ದರು. 
ಹಾಸನ

ಚಿಕ್ಕತಿರುಪತಿ ಕ್ಷೇತ್ರ ತಲುಪಿದ ದೇವರ ಆಭರಣ

ಪ್ರಮುಖ ಮುಖ್ಯಾಂಶಗಳು

  • Chikka Tirupati
ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ನಗರದ ತಾಲೂಕು ಕಚೇರಿ ಖಜಾನೆಯಲ್ಲಿ ಇರಿಸಲಾಗಿದ್ದ ಆಭರಣಗಳನ್ನು ಬಿಗಿಭದ್ರತೆಯಲ್ಲಿ ಸೋಮವಾರ ಬೆಳಗ್ಗೆ ಜೋಡೆತ್ತಿನ ಗಾಡಿಯಲ್ಲಿ ದೇಗುಲಕ್ಕೆ ಕಳುಹಿಸಿ ಕೊಡಲಾಯಿತು.
ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಮಾತನಾಡಿ, ರಾಜ್ಯದಲ್ಲಿ ಚಿಕ್ಕ ತಿರುಪತಿ ಎಂದು ಪ್ರಸಿದ್ಧವಾದ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ಮಹಾರಥೋತ್ಸವವು ಜು.26 ಭಾನುವಾರ ಜರುಗಲಿದೆ. 17 ದಿನಗಳ ಕಾಲ ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ಇದರ ಅಂಗವಾಗಿ ಕ್ಷೇತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಭರಣಗಳನ್ನು ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಮತ್ತು ಮುಖಂಡರ ಮೂಲಕ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಭರಣಗಳನ್ನು ಹೊತ್ತ ಅಲಂಕೃತ ಎತ್ತಿನ ಗಾಡಿಯು ಶ್ರೀಕ್ಷೇತ್ರ ತಲುಪಿತು. ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಅಗ್ಗುಂದ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಅಭಿವೃದ್ಧಿ ಸಮಿತಿ ಸದಸ್ಯರಾದ ಟಿ.ಆರ್. ನಾಗರಾಜು, ರಂಗರಾಜು, ಶಿರಸ್ತೇದಾರ್ ಶಿವಶಂಕರ್, ಮುಜರಾಯಿ ಇಲಾಖೆ ಅಧಿಕಾರಿ ನಾಗರತ್ನ, ಬೊಮ್ಮೇನಹಳ್ಳಿ ಪರಮಶಿವಯ್ಯ, ವಿಶ್ವನಾಥ್, ಟಿ.ವಿ. ಅರುಣಕುಮಾರ್, ದೇವಾಲಯದ ಆಗಮಿಕರಾದ ರಾಮಪ್ರಸಾದ್, ವರದರಾಜು, ಶ್ರೀನಿವಾಸ್, ಗಿರಿಕೇಸರಿ, ಪಾರುಪತ್ತೇದಾರ್ ಲೋಕೇಶಯ್ಯ, ಪುಷ್ಪರಾಜು, ರೇಣುಕಾ, ಶ್ರೀನಿವಾಸ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.