ಬೇಲೂರಿನ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ದತ್ತಮಾಲಾ ಅಭಿಯಾನದಲ್ಲಿ ಮಾಲೆ ಧರಿಸಿರುವ ಯುವಕರು.  
ಹಾಸನ

ದತ್ತಮಾಲಾ ಧಾರಣೆ ಅಭಿಯಾನಕ್ಕೆ ಚಾಲನೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಸಂಸ್ಕಾರ, ಸೌಹಾರ್ದತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ದೀಕ್ಷೆ
  • ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ನಾಗೇಶ್ ಅಭಿಮತ
ಬೇಲೂರು: ಪಟ್ಟಣದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ತಾಲೂಕು ಘಟಕದಿಂದ ದತ್ತಮಾಲಾ ಧಾರಣೆ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ನಾಗೇಶ್ ಮಾತನಾಡಿ, ದತ್ತಮಾಲಾ ಧಾರಣೆ ಭಕ್ತರ ಜೀವನದಲ್ಲಿ ಶ್ರದ್ಧೆ, ಶಿಸ್ತು ಮತ್ತು ಭಕ್ತಿಯೊಂದಿಗೆ ಸಮಾಜದಲ್ಲಿ ಸಂಸ್ಕಾರ ಹಾಗೂ ಸೌಹಾರ್ದತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತಾಲೂಕಿನಲ್ಲಿ ಪ್ರತಿವರ್ಷ ಭಕ್ತರು ದತ್ತ ಪೀಠಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ದೀಕ್ಷೆ ಸ್ವೀಕರಿಸಿ ಹೊರಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಬಜರಂಗ ದಳ ಮತ್ತು ವಿಶ್ವ ಹಿಂದು ಪರಿಷತ್ ಭಕ್ತರಿಗೆ ಅಗತ್ಯ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.
ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾದ ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ಶತಮಾನಗಳಿಂದ ಪೂಜೆ ನಡೆಯುತ್ತಿರಲಿಲ್ಲ. ವಿಶ್ವ ಹಿಂದು ಪರಿಷತ್-ಬಜರಂಗ ದಳದ ನಿರಂತರ ಹೋರಾಟದಿಂದ ಹಿಂದು ಅರ್ಚಕರ ನೇಮಕವಾಗಿದ್ದು ದತ್ತ ಪಾದುಕೆಗೆ ತ್ರಿಕಾಲ ಪೂಜೆ ಮತ್ತು ಪ್ರತಿ ಹುಣ್ಣಿಮೆಯಂದು ರುದ್ರಾಭಿಷೇಕ ನಡೆಯುತ್ತದೆ. ಸಮಸ್ತ ಹಿಂದುಗಳು ದತ್ತ ಪೀಠಕ್ಕೆ ಭಕ್ತಿಯಿಂದ ಬಂದು ಪೂಜೆ ಸಲ್ಲಿಸಿ ದತ್ತಾತ್ರೇಯನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಸಂಯೋಜಕ ಭರತ್, ವಿದ್ಯಾರ್ಥಿ ಪ್ರಮುಖ ಯಶ್ವಂತ್, ಗೋರಕ್ಷ ಪ್ರಮುಖರಾದ ಸಂಜಯ್, ಶರತ್, ಮಂದಿರ ಪ್ರಮುಖ ಪ್ರಜ್ವಲ್, ನಗರ ಕಾರ್ಯದರ್ಶಿ ಹೇಮಂತ್ ಇತರರಿದ್ದರು.