ಬೇಲೂರು ಪಟ್ಟಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆ ಹಿಂಭಾಗದಲ್ಲಿರುವ ಮರದ ಎರಡೂ ಬದಿಗಳಲ್ಲೂ ವಿದ್ಯುತ್ ತಂತಿ ಹಾದು ಹೋಗಿರುವುದು. 
ಹಾಸನ

ವಿದ್ಯುತ್ ತಂತಿಗೆ ತಾಗುತ್ತಿರುವ ರೆಂಬೆ ಕತ್ತರಿಸಿರಿ

ಪ್ರಮುಖ ಮುಖ್ಯಾಂಶಗಳು

  • electric wire
ಬೇಲೂರು: ಪಟ್ಟಣದ ಅಂಬೇಡ್ಕರ್ ಪ್ರತಿಮೆ ಹಿಂಭಾಗದ ಆಲದ ಮರಕ್ಕೆ ತಾಗುವಂತೆ ವಿದ್ಯುತ್ ತಂತಿಗಳು ಹಾದುಹೋಗಿವೆ. ಇದರಿಂದ ಮರದ ಮೇಲೆ ಕುಳಿತುಕೊಳ್ಳುವ ಪಕ್ಷಿಗಳು ಸಾಯುತ್ತಿವೆ. ಅಲ್ಲದೇ ಮಳೆ ಬಂದ ಸಂದರ್ಭದಲ್ಲಿ ಮರದ ಕೆಳಗೆ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ಈ ಸಂಬಂಧ ಸೆಸ್ಕ್ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿದ್ಯುತ್ ತಂತಿಗೆ ತಗುಲಿ ಸತ್ತ ಪಕ್ಷಿಗಳಿಂದ ದುರ್ವಾಸನೆ ಬರುತ್ತಿದೆ. ಕೆಲವರು ಇದೇ ಜಾಗದಲ್ಲಿ ಕಸ ಹಾಕುತ್ತಿರುವುದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮರದ ರೆಂಬೆ ಕೊಂಬೆಗಳನ್ನಾದರೂ ಸೆಸ್ಕ್ ಸಿಬ್ಬಂದಿ ತೆರವಿಗೆ ಮುಂದಾಗಬೇಕು ಒತ್ತಾಯಿಸಿದ್ದಾರೆ.