ಗಂಡಸಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು. ಮೆಟ್ರೋ ಬಾಬು, ಚಂದ್ರಶೇಖರ್, ಅಯ್ಯಣ್ಣ, ನಾಗರಾಜು, ಕುಮಾರ್, ಕೋಟಿ ಪ್ರದಿ ನಂಜುಂಡಪ್ಪ ಇದ್ದರು 
ಹಾಸನ

ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಗಂಡಸಿ-ಚಿಕ್ಕಕಟ್ಟೆ ಬಳಿಯಿರುವ ಸರ್ಕಾರಿ ಜಾಗ
  • ಶಾಸಕ ಕೆ.ಎಂ. ಶಿವಲಿಂಗೇಗೌಡ
ಗಂಡಸಿ: ಗಂಡಸಿ-ಚಿಕ್ಕಕಟ್ಟೆ ಬಳಿಯಿರುವ ಸರ್ಕಾರಿ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಭರವಸೆ ನೀಡಿದರು.
ಇಲ್ಲಿನ ಶ್ರೀ ದೊಡ್ಡಮ್ಮ-ಚಿಕ್ಕಮ್ಮ ಜಾತ್ರಾ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಜಲಜೀವನ ಮಷಿನ್ ಯೋಜನೆಯಡಿ ಗಂಡಸಿಯಲ್ಲಿ ಶುದ್ಧ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಮನೆಗಳಿಗೆ ಶುದ್ಧ ನೀರು ಕೊಡಲು ವಿಳಂಬವಾಗುತ್ತಿದ್ದು, ಗುತ್ತಿಗೆದಾರರಿಗೆ ನೋಟಿಸ್ ನೀಡಿ ಒಂದು ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಲಾಗುವುದು ಎಂದರು.
ಇಲ್ಲಿನ ರುದ್ರಭೂಮಿ ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದ್ದು, ಅತಿಕ್ರಮದಾರರನ್ನು ತೆರವುಗೊಳಿಸಿ ಶೆಡ್ ನಿರ್ಮಿಸಿ, ತಂತಿ ಬೇಲಿ ಹಾಕಿ ರಸ್ತೆ ಮಾಡಲಾಗುವುದು ಎಂದರು.
30 *40 ಅಳತೆಯ ನಿವೇಶನಗಳಿಗೆ ಇ-ಸ್ವತ್ತು ನೀಡಲು ಸರ್ಕಾರದ ಆದೇಶವಿಲ್ಲದ ಕಾರಣ ಮಾಡುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚಿಸಿದ ನಂತರ ಇ-ಸ್ವತ್ತು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಿದ್ದು, ಈ ಆದೇಶದಿಂದ ಬಡ ಕುಟುಂಬಗಳು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ತೆಗೆದುಕೊಳ್ಳಲು ಸುಲಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಗಂಡಸಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಅಯ್ಯಣ್ಣ, ನಾಗರಾಜು, ಕುಮಾರ್, ರವಿ, ಕೋಟಿ ಪ್ರದಿ, ನಂಜುಂಡಪ್ಪ ಇತರರಿದ್ದರು.