ನಗರದ ಬಸವೇಶ್ವರ ವೃತ್ತದಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸಭೆ ಹಮ್ಮಿಕೊಳ್ಳಲಾಗಿತ್ತು. ರೇವಣ್ಣ, ಚಂದ್ರಶೇಖರ್, ಗುರುಸಿದ್ದೇಶ್, ರಮೇಶ್, ಮಧು ಇತರರಿದ್ದರು. 
ಹಾಸನ

ಎಲ್ಲ ರಂಗಗಳಲ್ಲೂ ಛಾಪು ಮೂಡಿಸಿದ್ದ ಶಿವಶಂಕರಪ್ಪ

ಅರಸೀಕೆರೆ: ಸರಳ, ಸಜ್ಜನ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಸಾಧು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹಿರಿಯೂರು ರೇವಣ್ಣ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ ಒಳಗೊಂಡಂತೆ ಎಲ್ಲ ರಂಗಗಳಲ್ಲಿ ಛಾಪು ಮೂಡಿಸಿದ ಅಪರೂಪದ ವ್ಯಕ್ತಿತ್ವ ಶಿವಶಂಕರಪ್ಪ ಅವರದು. ದಾವಣಗೆರೆ ಜಿಲ್ಲೆಯ ದಿಟ್ಟ ರಾಜಕಾರಣಿಗಳ ಪೈಕಿ ಒಬ್ಬರಾಗಿದ್ದರು. ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿ ಹಲವರ ಬದುಕಿಗೆ ದಾರಿದೀಪವಾಗಿದ್ದ ಅದಮ್ಯ ಚೇತನ ಮರೆಯಾಗಿದೆ ಎಂದು ನೆನೆದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್ ಮಾತನಾಡಿ, ರಾಜ್ಯದ ಉದ್ದಗಲಕ್ಕೂ ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಿಸಲು ನಿರಂತರ ಪ್ರಯತ್ನ, ನಡೆಸಿದ ಹೋರಾಟ ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಸ್ವಾಮಿ, ಗಂಜಿಗೆರೆ ಚಂದ್ರಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಾಧರ್, ಜಿವಿಟಿ ಬಸವರಾಜ್, ಹೇಮಂತ್, ಕಿರಣ್‌ಕುಮಾರ್, ಸಂತೋಷ್, ರಮೇಶ್, ಎನ್. ಜಿ.ಮಧು, ಬಿ.ಜಿ.ನಿರಂಜನ್, ಚೇತನ್, ಚಂದ್ರಶೇಖರ್, ಸುಬ್ರಹ್ಮಣ್ಯಬಾಬು, ವಕೀಲ ವಿವೇಕ್, ಕೆವಿಎನ್ ಶಿವು, ಅರುಣ್‌ಕುಮಾರ್, ಬ್ಯಾಡ್ರಳ್ಳಿ ಜಯರಾಮ್, ರಂಗಸ್ವಾಮಿ, ಉಮೇಶ್, ಮಾದ್ನಳ್ಳಿ ನಾಗಣ್ಣ, ಆನಂದ, ನಗರಸಭಾ ಮಾಜಿ ಅಧ್ಯಕ್ಷ ವಿದ್ಯಾಧರ್, ಭಾಸ್ಕರ್, ಪುಟ್ಟಸ್ವಾಮಿ, ಶೇಖರ್, ಮೋಹನ್ ಕುಮಾರ್, ಡಾ.ವಿಜಯ್ ಅಗಡಿ, ಮಂಜುನಾಥ್, ದಿವಾಕರ್, ಕುಮಾರ್ ಹಾಜರಿದ್ದರು.