ಮಾಡಾಳು ಗ್ರಾಮದಲ್ಲಿ ಶಿವನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಮಾತನಾಡಿದರು. ನಟರಾಜ್, ಶಿವಲಿಂಗಪ್ಪ, ಸೋಮಣ್ಣ, ಮಹದೇವಪ್ಪ, ಶಿವಣ್ಣ, ಲೋಕೇಶ್ ಇತರರಿದ್ದರು.
- ಹಾರನಹಳ್ಳಿ ಕೋಡಿಮಠದ ಜಗದ್ಗುರು
- ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ
ಅರಸೀಕೆರೆ ಗ್ರಾಮಾಂತರ: ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಸ್ವರ್ಣ ಗೌರಮ್ಮ ದೇವಿ ಸನ್ನಿಧಿ ಭಕ್ತರ ಅಷ್ಟೋತ್ತರಗಳನ್ನು ಈಡೇರಿಸುವ ಸುಕ್ಷೇತ್ರ ಎಂದು ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಕೋಡಿಮಠ ಮಹಾ ಸಂಸ್ಥಾನ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮೂಲ ಗೌರಮ್ಮನವರ ದೇವಾಲಯದ ಕಾಮಗಾರಿಯನ್ನು ಗುರುವಾರ ವೀಕ್ಷಿಸಿದ ನಂತರ ಶ್ರೀಗಳು ಮಾತನಾಡಿ, ಶ್ರಾವಣ ಪಂಚಮಿ ದಿನದಂದು ನೂತನ ದೇವಾಲಯ ಲೋಕಾರ್ಪಣೆ ಆಗಲಿದ್ದು, ಅಲ್ಲಿಯವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರ ಮುರುಡೇಶ್ವರದ ವಿನಾಯಕ್ ಅವರಿಗೆ ಸೂಚಿಸಿದರು.
ಕಾಮಗಾರಿಗೆ ಶ್ರೀ ಮಠದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದಯ. ಸ್ವರ್ಣ ಗೌರಮ್ಮ ದೇವಿಗೆ ಕೋಡಿಮಠದ ಮಹಾ ತಪಸ್ವಿ ಶಿವಲಿಂಗ ಸ್ವಾಮೀಜಿ ಅವರು ಮೂಗುತಿಯನ್ನು ನೀಡಿದ್ದು, ಆ ಮೂಗುತಿಯ ದರ್ಶನದಿಂದ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿವೆ ಎಂದರು.
ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್.ನಟರಾಜ್, ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನಪ್ಪ, ಮುಖಂಡರಾದ ಎಂ.ಸಿ. ನಟರಾಜ್, ಮಾಡಾಳು ಶಿವಲಿಂಗಪ್ಪ, ಕೋಡಿಮಠದ ಏಜೆಂಟ್ ಮಹದೇವಪ್ಪ, ಬಿ.ಎಂ.ಮಲ್ಲಿಕಾರ್ಜುನ್, ದುಮ್ಮೇನಹಳ್ಳಿ ಶಂಕರಪ್ಪ, ಎಂ.ಬಿ.ಅಶೋಕ್, ಹೊಸಳ್ಳಿ ಶಿವಣ್ಣ, ಎಂ.ಟಿ.ಲೋಕೇಶ್, ಎಂ.ಡಿ.ಸೋಮಶೇಖರ್ ಇತರರಿದ್ದರು.