ಪಟ್ಟಣ ಸಮೀಪದ ಎಸ್.ಸೂರಾಪುರದಲ್ಲಿ ಪುರಸಭೆಗೆ ಸೇರಿದ ನೀರು ಶುದ್ಧೀಕರಣ ಘಟಕದಲ್ಲಿ ಫಿಲ್ಟರ್ ಮೀಡಿಯಾಗಳನ್ನು ಬದಲಾಯಿಸುವ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು.ಎ.ಆರ್.ಅಶೋಕ್, ಉಷಾ ಸತೀಶ್, ಮೀನಾಕ್ಷಿ ವೆಂಕಟೇಶ್, ಶೈಲೇಶ್, ಮಣಿ ಇತರರಿದ್ದರು. 
ಹಾಸನ

ಗುಣಮಟ್ಟದಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಿ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಸೂಚನೆ
ಬೇಲೂರು: ಪಟ್ಟಣ ಸಮೀಪದ ಎಸ್.ಸೂರಾಪುರದಲ್ಲಿ ಪುರಸಭೆಗೆ ಸೇರಿದ ನೀರು ಶುದ್ಧೀಕರಣ ಘಟಕದಲ್ಲಿ 96.51 ಲಕ್ಷ ರೂ. ವೆಚ್ಚದ ಫಿಲ್ಟರ್ ಮೀಡಿಯಾಗಳನ್ನು ಬದಲಾಯಿಸುವ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಬುಧವಾರ ಭೂಮಿ ಪೂಜೆ ನೆರವೇರಿಸಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದು ಕೊಳ್ಳಬೇಕು. ಜತೆಗೆ ಸ್ಥಳದಲ್ಲಿರುವ ಜನಪ್ರತಿನಿಧಿಗಳು, ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಬೇಕು. ಗುಣಮಟ್ಟದ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದರು. ಅಲ್ಲದೆ ಚಳಿಗಾಲದ ಅಧಿವೇಶನದಲ್ಲಿ ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಮಾಡಲಾಗುತ್ತಿಲ್ಲ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದಿಂದ ಈಗಾಗಲೇ 3.60 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಕೆಂಪೇಗೌಡ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಇದರೊಂದಿಗೆ ನಗರೋತ್ಥಾನ ಹಾಗೂ ವಿಶೇಷ ಅನುದಾನವಾಗಿ ಸರ್ಕಾರದಿಂದ 9 ಕೋಟಿ ರೂ. ತಂದಿದ್ದು, ಇದರಲ್ಲಿ 8 ಕೋಟಿ ರೂ. ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮತ್ತು ನೀರು ಶುದ್ಧೀಕರಣ ಘಟಕದ ವಾಟರ್ ಫಿಲ್ಟರ್ ಅಳವಡಿಕೆಗೆ 96 ಲಕ್ಷ ರೂ. ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಪುರಸಭೆ ಮಾಜಿ ಅದ್ಯಕ್ಷ ಎ.ಆರ್.ಅಶೋಕ್, ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಪುರಸಭೆ ಸದಸ್ಯ ಮೀನಾಕ್ಷಿ ವೆಂಕಟೇಶ್, ಶೈಲೇಶ್, ಮಣಿ, ಜಮೀಲಾ ತೌಫಿಕ್, ಜಗದೀಶ್, ಪ್ರಭಾಕರ್, ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಇಂಜಿನಿಯರ್ ಮೋಹನ್ ಕುಮಾರ್, ಆರ್‌ಐ ಲಕ್ಷ್ಮಣ್ ಸೇರಿದಂತೆ ಇತರರಿದ್ದರು.