ಅರಕಲಗೂಡು ತಾಲೂಕು ಸಿದ್ಧಾಪುರ ಗೇಟ್‌ನಲ್ಲಿ ಕೆ.ಬಿ. ಮಲ್ಲಪ್ಪನವರ ಅಭಿಮಾನಿಗಳ ಬಳಗದ ವತಿಯಿಂದ ಮಾಜಿ ಸಚಿವ ಮಲ್ಲಪ್ಪನವರ ಪುಣ್ಯಸ್ಮರಣೆ ಆಚರಿಸಲಾಯಿತು. ಡಾ. ಮೋಹನ್, ರಾಘವೇಂದ್ರ ಗೌಡ, ಕೃಷ್ಣೇಗೌಡ ಇತರರಿದ್ದರು.
- ಮಲ್ಲಪ್ಪ ನವರ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪೂಜೆ
ಅರಕಲಗೂಡು: ತಾಲೂಕಿನ ಸಿದ್ಧಾಪುರ ಗೇಟ್ ಮತ್ತು ರಾಮನಾಥಪುರದಲ್ಲಿ ಮಾಜಿ ಸಚಿವ ದಿ.ಕೆ.ಬಿ. ಮಲ್ಲಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಿದ್ಧಾಪುರ ಗೇಟ್ ಮತ್ತು ರಾಮನಾಥಪುರದ ಸೇತುವೆ ಸರ್ಕಲ್ ಬಳಿ ಸೇರಿದ ಸಿದ್ಧಾಪುರ ಗೇಟ್ ಮತ್ತು ರಾಮನಾಥಪುರದಲ್ಲಿ ಸೇರಿದ ಮಾಜಿ ಸಚಿವ ಕೆ .ಬಿ ಮಲ್ಲಪ್ಪ ನವರ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ, ಅನ್ನದಾನ ಕಾರ್ಯಕ್ರಮ ನಡೆಸಿಕೊಟ್ಟರು.
ಸಿದ್ದಾಪುರ ಗೇಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲ್ಲಪ್ಪನವರ ಪುತ್ರ ಹಾಗೂ ಬೆಂಗಳೂರು ಜಯದೇವ ಆಸ್ಪತ್ರೆಯ ವೈದ್ಯ ಡಾ.ಮೋಹನ್ ಮಲ್ಲಪ್ಪ ಮಾತನಾಡಿ, ಮಲ್ಲಪ್ಪ ಅವರ ಅಭಿಮಾನಿಗಳ ಬಳಗವದರು ಅವರ 13 ನೇ ವರ್ಷದ ಪುಣ್ಯಸ್ಮರಣೆ ಆಚರಿಸುತ್ತಿರುವುದು ಸಂತಸದ ವಿಷಯ ಎಂದ ಅವರು,ಸಚಿವರಾಗಿದ್ದ ದಿನಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಸ್ಮರಿಸಿದರು.
ಮುಖಂಡರಾದ ಬಾನಗುಂದಿ ಕೃಷ್ಣೇಗೌಡ, ತರಗಳಲೆ ಪುಟ್ಟಸ್ವಾಮಿಗೌಡ, ಕಡವಿನಗೊಸಳ್ಳಿ ಗೋವಿಂದೇಗೌಡ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಘವೇಂದ್ರಗೌಡ, ಹೊನಗಾನಹಳ್ಳಿ ಭರತ್, ತರಗಳಲೆ ಲೋಕೇಶ್ ಇತರರಿದ್ದರು.