ಒತ್ತುವರಿಯಾಗಿದ್ದ ಭೂಮಿಯನ್ನು ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್ ನೇತೃತ್ವದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತೆರವುಗೊಳಿಸಿದೆ.
ಸಕಲೇಶಪುರ: ತಾಲೂಕಿನ ಹೊಡಚಹಳ್ಳಿ ಗ್ರಾಮದ ಹೊರವಲಯದಲ್ಲಿ ಒತ್ತುವರಿಯಾಗಿದ್ದ 22 ಎಕರೆ ಸರ್ಕಾರಿ ಜಮೀನನ್ನು ಅರಣ್ಯ ಇಲಾಖೆ ಸೋಮವಾರ ತೆರವುಗೊಳಿಸಿದೆ.
ಗ್ರಾಮದ ರಂಜಿತ್ ಹಾಗೂ ಸಚಿನ್ ಅವರು ಗ್ರಾಮದ ಸರ್ವೇ ನಂಬರ್ 21/28 ರಲ್ಲಿದ್ದ ಡೀಮ್ಡ್ ಅರಣ್ಯ ಪ್ರದೇಶವನ್ನು ತಂತಿಬೇಲಿ ನಿರ್ಮಿಸಿ ಒತ್ತುವರಿ ಮಾಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್ ನೇತೃತ್ವದ ತಂಡ ತಂತಿ ಬೇಲಿ ತೆರವುಗೊಳಿಸಿ ತಂತಿಯನ್ನು ವಶಕ್ಕೆ ಪಡೆದಿದೆ. ಕಳೆದ ಎರಡು ವರ್ಷದಲ್ಲಿ ಸಕಲೇಶಪುರ ವಲಯ ವ್ಯಾಪ್ತಿಯಲ್ಲಿ ಇನ್ನೂರು ಎಕರೆಗೂ ಅಧಿಕ ಭೂಕಬಳಿಕೆಯಾಗಿದ್ದ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್‌ಕುಮಾರ್ ತಿಳಿಸಿದ್ದಾರೆ.