ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನ ನಡೆಸಿದರು.
- ಕಾವೇರಿ ನದಿಯಲ್ಲಿ ಸ್ವಚ್ಛತಾ ಕಾರ್ಯ
ಅರಕಲಗೂಡು: ತಾಲೂಕಿನ ರಾಮನಾಥಪುರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ಕಾಲೇಜಿಮ ರಾಷ್ಟ್ರೀಯ ಸೇವಾ ಯೋಜನೆ, ಮತ್ತು ಕಾವೇರಿ ನದಿ ಸ್ವಚ್ಛತಾ ಅಂದೋಲನ ಸಮಿತಿ ವತಿಯಿಂದ ಇತ್ತೀಚೆಗೆ ದೇವಾಲಯದ ಅವರಣ ಮತ್ತು ಕಾವೇರಿ ನದಿ ದಂಡೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಇದೇ ವೇಳೆ ಕಾವೇರಿ ನದಿಯಲ್ಲಿ ಪುಣ್ಯಸ್ನಾನಮಾಡಿ ತಾವು ತೊಟ್ಟ ಬಟ್ಟೆಗಳು ಇನ್ನಿತರ ವಸ್ತುಗಳನ್ನು ನದಿಯಲ್ಲಿ ಬಿಡಬಾರದೆಂದು ಭಕ್ತರಲ್ಲಿ ಅರಿವು ಮೂಡಿಸಿದರು.
ಕಾವೇರಿ ನದಿ ಸ್ವಚ್ಛತಾ ಅಂದೋಲನ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಯುವ ಘಟಕದ ಕಾರ್ಯದರ್ಶಿ ಆರ್.ಕೆ. ಶ್ರೀನಿವಾಸ್, ಸದಸ್ಯರಾದ ಅರ್.ಎಂ. ಅಭಿಷೇಕ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕೆ.ಎಸ್. ಶ್ಯಾಮಲದೇವಿ, ಸಹ ಸಂಚಾಲಕರಾದ ಕೆ.ಎನ್.ಕೃಷ್ಣ, ಉಪನ್ಯಾಸಕರಾದ ಡಾ. ಪ್ರದೀಪ್ , ಯುವರಾಜ್ , ದಯಾನಂದ , ಕಿರಣ್, ಅರ್ಪಿತಾ, ಪ್ರಿಯದರ್ಶಿನಿ, ಲಾವಣ್ಯ-ಭಾಗ್ಯಮ್ಮ ಪಾಲ್ಗೊಂಡಿದ್ದರು.