ಅರಕಲಗೂಡು ಪಟ್ಟಣದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮೇಲಿದ್ದ ಒಣಗಿದ ಹೂವಿನ ಹಾರಗಳನ್ನು ತೆರವುಗೊಳಿಸಲಾಯಿತು. ಎ.ಆರ್.ಅಶೋಕ್, ಬಿ.ಸಿ.ಉಮೇಶ್, ಪಾಂಡುರಂಗ, ಲೋಹಿತ್ ಇದ್ದರು.
ಬೇಲೂರು: ಪಟ್ಟಣದ ವಿವಿಧ ವೃತ್ತಗಳಲ್ಲಿರುವ ಪ್ರತಿಮೆಗಳನ್ನು ಪುರಸಭೆ ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಮಹಾನ್ ನಾಯಕರ ಪ್ರತಿಮೆಗಳಿಗೆ ಗೌರವ ಕೊಡುವುದೆಂದರೆ ಕೇವಲ ಹೂವಿನ ಹಾರ ಹಾಕುವುದಲ್ಲ. ಸ್ವಚ್ಛತೆಯನ್ನೂ ಕಾಪಾಡಬೇಕು. ಹೂವಿನ ಹಾರ ಹಾಕಬೇಕಾದರೆ ಇದ್ದಂತಹ ಗೌರವ ಅದೇ ಹಾರ ಒಣಗಿ ಬಾಡಿ ಪ್ರತಿಮೆಯ ಮೇಲೆ ಕೆಟ್ಟದಾಗಿ ಕಾಣುವಾಗ ಅದನ್ನು ತೆಗೆಯಬೇಕು ಎನ್ನುವ ಮನಸ್ಥಿತಿ ಇರಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ಗಮನಸೆಳೆದ ಹಿನ್ನೆಲೆಯಲ್ಲಿ ಪ್ರತಿಮೆಗಳು ಸ್ವಚ್ಛವಾಗಿ ಕಾಣಬೇಕು. ಈ ವಿಚಾರವಾಗಿ ಪುರಸಭೆ ಅಧಿಕಾರಿಗಳಿಗೂ ತಿಳಿಸಿದರೂ ಗಮನ ಹರಿಸದ ಕಾರಣ ಸ್ನೇಹಿತರು ಸೇರಿ ಸ್ವಚ್ಛತೆ ಕೈಗೊಂಡಿದ್ದೇವೆ. ಇನ್ನು ಮುಂದೆ ಯಾವ ಪ್ರತಿಮೆಯ ಮೇಲೆ ಹಾರ ಒಣಗಿರುತ್ತದೋ ಅದನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ ಎಂದರು.
ಸ್ಥಳೀಯ ಮುಖಂಡರಾದ ಬಿ.ಸಿ.ಉಮೇಶ್, ಪಾಂಡುರಂಗ, ಲೋಹಿತ್ ಇದ್ದರು.