ಅರಸೀಕೆರೆ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಗಣ್ಯರು ಉದ್ಘಾಟಿಸಿದರು. ಸಿದ್ದೇಶ್ ನಾಗೇಂದ್ರ, ಮನೋಜ್ ಕುಮಾರ್, ಅಮಿತ್ ಶೆಟ್ಟಿ ಇದ್ದರು.
- ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ
- 24ನೇ ವಾರ್ಡ್
ಅರಸೀಕೆರೆ: ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರಿನ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹೇಳಿದರು.
ನಗರದ 24ನೇ ವಾರ್ಡ್‌ನಲ್ಲಿ ಬುಧವಾರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಫ್ಲೋರೈಡ್ ಪೀಡಿತರ ಬವಣೆ ಅರಿತಿದ್ದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಹೇಮಾವತಿ ನದಿ ಮೂಲದಿಂದ ಪಟ್ಟಣಕ್ಕೆ ನೀರು ಕೊಡುವ ಕೆಲಸ ಮಾಡಿದ್ದನ್ನು ಕ್ಷೇತ್ರದ ಜನರು ಮರೆಯುವಂತಿಲ್ಲ. ಇದರಿಂದಾಗಿ ಜಲದಾಹ ನೀಗಿದಂತಾಗಿದೆ. ಇದೀಗ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜೇಗೌಡ ಅವರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದು ನೆರವಾಗಿರುವುದು ಶ್ಲಾಘನೀಯ ಎಂದರು.
ನಗರಸಭೆ ಮಾಜಿ ಸದಸ್ಯೆ ಶುಭಾ ಮನೋಜ್ ಕುಮಾರ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆ ಅಂಗವಾಗಿ ವಾರ್ಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗುತ್ತಿರುವುದು ಸಂತಸದ ವಿಷಯ. ನಾಗರಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಜಿ.ಎನ್.ಮನೋಜ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್‌ಶೆಟ್ಟಿ, ಹಿರಿಯ ಮುಖಂಡ ಎನ್.ಡಿ.ಪ್ರಸಾದ್, ಉಮಾ ಕುಮಾರ್, ಅಣ್ಣನಾಯಕನಹಳ್ಳಿ ವಿಜಯ್‌ಕುಮಾರ್, ಬಾಣಾವರ ಜಯಣ್ಣ, ಬೆಳಗುಂಬ ಲೋಕೇಶ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ನರೇಶ್, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಖಜಾಂಚಿ ಹೇಮಂತ್ ಇತರರಿದ್ದರು.