ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಹಿರೀಸಾವೆ ರಸ್ತೆಯಲ್ಲಿರುವ ಸಿಎಸ್‌ಐ ಗ್ರೇಸ್ ದೇವಾಲಯದಲ್ಲಿ ಬುಧವಾರ ಸೇರಿದ್ದ ಜನಸ್ತೋಮ. 
ಹಾಸನ

ಹಿರೀಸಾವೆಯಲ್ಲಿ ಕ್ರಿಸ್‌ಮಸ್ ಆಚರಣೆ

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಹಿರೀಸಾವೆ ರಸ್ತೆಯಲ್ಲಿರುವ ಸಿಎಸ್‌ಐ ಗ್ರೇಸ್ ದೇವಾಲಯದಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಮೂಲಕ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಆಚರಿಸಿದರು.
ಚರ್ಚಿನ ಗುರುಗಳಾದ ಫಾ. ಜಾನ್ ಬಾಬು ಅವರ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಕ್ರಿಸ್ಮಸ್ ಹಬ್ಬಕ್ಕೆ ಪರಸ್ಪರ ಶುಭಕೋರಿ ಸಿಹಿ ಹಂಚುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಹಾಗೂ ಅವರ ಪತ್ನಿ ಗೀತಾ ಗೋಪಾಲಸ್ವಾಮಿ, ಕ್ರೈಸ್ತ ಬಾಂಧವರಿಗೆ ಹಬ್ಬದ ಶುಭ ಕೋರಿದರು. ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯ ನಿಶ್ಚಲ್ ಹೈಜಾಕ್, ಪ್ರಮುಖರಾದ ಭಾಗ್ಯ ಜೇಮ್ಸ್, ಮೇಬಲ್ ದೇವಪ್ರಸಾದ್, ಸಾಮಿಲ್ ಪ್ರಕಾಶ್, ಜಾನ್ ವಿಲ್ಸನ್, ಸಂಜಯ್ ಜೋಸೆಫ್, ಮಂಜುನಾಥ್, ಮೈಕೆಲ್, ಅಣ್ಣಪ್ಪ, ಗುರುಶಾಂತ, ಅರುಣಾ ನಿಶ್ಚಲ್, ಮೊನಾಲಿಸಾ, ಲೂಯಿಸ್ ಪ್ರಕಾಶ್, ಶೋಭಾ ಜಾನ್, ಜಯಶೀಲಾ, ಮುಖಂಡರಾದ ಎನ್.ಎಸ್.ಲಕ್ಷ್ಮಣ್, ಫೈನಾನ್ಸ್ ಪ್ರಕಾಶ್, ಬಾಣನಕೆರೆ ಅಶೋಕ್ ಇತರರು ಹಾಜರಿದ್ದರು.