ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ದಿವ್ಯ ಶಾಲೆ ವಿದ್ಯಾರ್ಥಿಗಳಾದ ನಿದಾ ಬಾನು. ಝಾಕಿಯಾ ಖಾನಂ. ಎಚ್.ಎಂ.ಜೀವನ್ , ಸನಾ ಪರ್ವಿನ್, ವೈಗಾನವಿ., ಡಿ.ಎಂ.ನಂದು. 
ಹಾಸನ

ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದಿವ್ಯ ವಿದ್ಯಾಸಂಸ್ಥೆ ಮೂಲಮಂತ್ರ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ಹೇಳಿಕೆ
ಬೇಲೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಶಾಲೆ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ದಿವ್ಯ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗೌಡೇಗೌಡ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ದಿವ್ಯ ಶಿಕ್ಷಣ ಸಂಸ್ಥೆಯು 23 ವರ್ಷಗಳಿಂದ ಸತತವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಶೇ.100ರಷ್ಟು ಫಲಿತಾಂಶ ಕೊಡುತ್ತಿದೆ. 2025-26 ನೇ ಸಾಲಿನಲ್ಲಿಯೂ ಶೇ.100 ರಷ್ಟು ಫಲಿತಾಂಶ ಕೊಟ್ಟಿರುವ, ನಗರ ಪ್ರದೇಶ ಮತ್ತು ಗ್ರಾಮಾಂತರ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಬೇಲೂರು ನಗರದ ಶಿಕ್ಷಣ ಸಂಸ್ಥೆಯಾಗಿದೆ. ಮಕ್ಕಳಿಗಾಗಿ ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ, ಗ್ರಂಥಾಲಯ, ಸ್ಪೋಕನ್ ಇಂಗ್ಲಿಷ್, ಡಾನ್ಸ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್ ನಡೆಸಲಾಗುತ್ತದೆ ಮತ್ತು ಉತ್ತಮ ಆಟದ ಮೈದಾನವನ್ನು ಹೊಂದಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯ ಮೂಲಮಂತ್ರ. ಇಲ್ಲಿ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಮಕ್ಕಳ ಶ್ರೇಯಸ್ಸು ಬಯಸುತ್ತಿರುವ ಸಂಸ್ಥೆಯಾಗಿದ್ದು, ಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ ಈ ಬಾರಿಯ ನಮ್ಮ ದಿವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 26 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ 23 ವರ್ಷಗಳಿಂದ ನಿರಂತರವಾಗಿ ನಮ್ಮ ವಿದ್ಯಾಸಂಸ್ಥೆ ಶೇ.100 ರಷ್ಟು ಫಲಿತಾಂಶ ನೀಡುತ್ತ ಬಂದಿದ್ದು, ಇದರಲ್ಲಿ 2025-26ನೇ ಸಾಲಿನಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಡಿ.ಎ.ನಿದಾ ಬಾನು ಶೇ.98.8, ಝಾಕಿಯಾ ಕಾನಮ್ ಶೇ.94, ಎಚ್.ಎಂ. ಜೀವನ್ ಶೇ.93, ಸನಾ ಪರ್ವಿನ್ ಶೇ.91, ವೈ.ಗಾನವಿ ಶೇ.90, ಡಿ.ಎಂ. ನಂದು ಶೇ.90 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದು, ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾಸಂಸ್ಥೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.