ಆಲೂರು ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಲ್ಲೂರಿನಿಂದ ಚಿಕ್ಕನಲ್ಲೂರುವರೆಗಿನ ರಸ್ತೆ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು.  
ಹಾಸನ

ಸಿಎಸ್‌ಆರ್ ನಿಧಿಯಿಂದ ಚಿಕ್ಕನಲ್ಲೂರು ರಸ್ತೆ ಅಭಿವೃದ್ಧಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿಮೆಂಟ್ ಮಂಜು ಹೇಳಿಕೆ
  • ನಲ್ಲೂರು ಗ್ರಾಮದಲ್ಲಿ ಭೂಮಿಪೂಜೆ ಕಾರ್ಯಕ್ರಮ
ಆಲೂರು: ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್) ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ವಲಯದ ಪ್ರಗತಿಗೆ ಹೆಚ್ಚು ಬಳಕೆ ಮಾಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಲ್ಲೂರಿನಿಂದ ಚಿಕ್ಕನಲ್ಲೂರುವರೆಗಿನ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾನಾಡಿದರು.
ಸರ್ಕಾರದಿಂದಲೇ ಎಲ್ಲವನ್ನೂ ಮಾಡಲಾಗದು. ಉದ್ಯಮ ವಲಯದ ಬೆಂಬಲವೂ ಬೇಕಾಗುತ್ತದೆ. ಉದ್ಯಮಿಗಳು ಸಿಎಸ್‌ಆರ್ ಮೂಲಕ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ನಿವೃತ್ತ ಚೀಫ್ ಕನ್ಸರ್ವೇಟಿವ್ ಆಫೀಸರ್ ಶಿವಣ್ಣ ಅವರ ಶ್ರಮದಿಂದ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಕಂಪನಿಯ ಸಿಎಸ್‌ಆರ್ ಫಂಡ್‌ನಿಂದ ವೇ ಫಾರ್ ಲೈಫ್ ಎನ್‌ಜಿಒ ಮುಂದಾಳತ್ವದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಒಂದೂವರೆ ಕಿ.ಮೀ. ರಸ್ತೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.
ಗ್ರಾಮದ ಮುಜರಾಯಿ ಇಲಾಖೆಯ ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾದಲ್ಲಿ ನಿತ್ಯಪೂಜೆ ನೆಡೆಯುತ್ತಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನ ತಂದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ತಹಸೀಲ್ದಾರ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡರು.
ಒಂದು ವರ್ಷದ ಹಿಂದೆ ಮೂಲ ವಿಗ್ರಹ ಕಳ್ಳತನವಾಗಿತ್ತು. ಬಳಿಕ ಪತ್ತೆಯಾಗಿ ಠಾಣೆಯಲ್ಲಿದರೂ ಪೊಲೀಸ್ ಇಲಾಖೆ ನಿಯಮಗಳಿಂದ ವಿಗ್ರಹವನ್ನು ಪುನಾ ದೇವಸ್ಥಾನಕ್ಕೆ ಮರಳಿಸಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಅವರ ಗಮನಕ್ಕೆ ಗ್ರಾಮಸ್ಥರು ತಂದರು.
ಹಿರಿಯ ಪರಿಸರವಾದಿ ಹೆಮ್ಮಿಗೆ ಮೋಹನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಮುಖಂಡರಾದ ಹರೀಶ್, ರಾಜಶೇಖರ್, ಯೋಗೇಶ್, ಮುಖಂಡರಾದ ಲಿಖಿತ್, ಚೇತನ್, ವಿಜಯಕುಮಾರ್, ರವಿಕುಮಾರ್ ,ದಿನೇಶ್ ಪಿಡಿಒ ಪರಮೇಶ್ ಇತರರು ಇದ್ದರು.