ಹೂವಿನಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ನಟರಾಜ್, ಜಯರಾಮ್, ಸಾವಿತ್ರಮ್ಮ, ಹೊನ್ನೇಗೌಡ, ಎನ್.ವಿದ್ಯಾ, ಇಂದ್ರಮ್ಮ, ದೊರೆಸ್ವಾಮಿ, ಪುಟ್ಟಸ್ವಾಮಿ, ಇದ್ದರು.
- ಶಾಸಕ ಸಿ.ಎನ್.ಬಾಲಕೃಷ್ಣ ಮಾಹಿತಿ
- ಹೂವಿನಹಳ್ಳಿ ಡೇರಿ ನೂತನ ಕಟ್ಟಡ ಉದ್ಘಾಟನೆ
ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನ 335 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಒಂದು ದಿನಕ್ಕೆ 1.86 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಇದರಿಂದ ದಿನಕ್ಕೆ ರೈತರಿಗೆ 58.06 ಲಕ್ಷ ರೂ. ಪಾವತಿ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೂವಿನಹಳ್ಳಿ ಗ್ರಾಮದಲ್ಲಿ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಂಗಳವಾರ ಮಾತನಾಡಿದರು. ತಾಲೂಕುಗಳಲ್ಲಿ ಚನ್ನಪಟ್ಟಣ 3 ಸ್ಥಾನದಲ್ಲಿದೆ. ಚನ್ನರಾಯಪಟ್ಟಣ ತಾಲೂಕು 4 ಸ್ಥಾನದಲ್ಲಿ ಇದೆ. ಹಾಸನ ಕೌಶಿಕದ ಹತ್ತಿರದ ಕೈಗಾರಿಕಾ ಪ್ರದೇಶದಲ್ಲಿ 600 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ನುಗ್ಗೇಹಳ್ಳಿ ಎಪಿಎಂಸಿ ಸಂತೆ ಜಾಗದ ಅಭಿವೃದ್ಧಿಗೆ 10 ಮಳಿಗೆಗಳು, ಪ್ರಾಂಗಣಗಳ ನಿರ್ಮಾಣಕ್ಕೆ 1.5 ಕೋಟಿ ರೂ.ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹೊನ್ನೇಗೌಡ, ಸಹಕಾರ ಸಂಘದ ಅಧ್ಯಕ್ಷೆ ಸಾವಿತ್ರಮ್ಮ ಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಟರಾಜ್, ತಾಪಂ ಮಾಜಿ ಉಪಾಧ್ಯಕ್ಷ ಜಯರಾಮ್, ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಗೋಪಾಲ್, ಮಂಜುನಾಥಸ್ವಾಮಿ, ಮೂಡಲಗಿರಿಗೌಡ, ಸಂಪತ್ ಕುಮಾರ್, ಯಲ್ಲಪ್ಪ, ಜೈಲಿಂಗೇಗೌಡ, ಚಿರಂಜೀವಿ, ಎನ್.ವಿದ್ಯಾ, ಸೋಮನಾಥ್, ಇಂದ್ರಮ್ಮ, ವಿಜಯ ಗೋಪಾಲ್, ಶಿವಮ್ಮ ರವಿ, ಕೆಂಪಮ್ಮ, ಮಂಜುಳಾ ಯೋಗೇಶ್, ಸುನಂದಾ ಸುರೇಶ್, ರೇಣುಕಮ್ಮ ಬಸವರಾಜ್, ಸಾವಿತ್ರಮ್ಮ, ಮಂಗಳಮ್ಮ ಇತರರು ಇದ್ದರು.