ಬಾಗೂರು ಹೋಬಳಿಯ ಕಲ್ಲೇ ಸೋಮನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ಬಸವರಾಜ್, ಯೋಗೇಶ್, ತಮ್ಮಯ್ಯಣ್ಣ, ಸಾವಿತ್ರಮ್ಮ, ಶಿವಯ್ಯ, ಲೋಕಿ ಇತರರು ಇದ್ದರು. 
ಹಾಸನ

ಕಲ್ಲೇಸೋಮನಹಳ್ಳಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • CC road
ಬಾಗೂರು: ಕಲ್ಲೇಸೋಮನಹಳ್ಳಿ ಗ್ರಾಮದ ಪರಿಶಿಷ್ಟ ಸಮಾಜದ ಜನರ ಒತ್ತಾಯದಂತೆ ಕಾಲನಿ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕಲ್ಲೇ ಸೋಮನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ಈಗಾಗಲೇ ವಿವಿಧ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಜತೆಗೆ ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ ರೂ., ಬಸವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಸುಮಾರು 25ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಇಂಜಿನಿಯರ್ ತ್ಯಾಗರಾಜ್, ಗುತ್ತಿಗೆದಾರ ನವೀನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಓಬಳಾಪುರ ಬಸವರಾಜ್, ಉದ್ಯಮಿ ಅಣತಿ ಯೋಗೇಶ್, ಮುಖಂಡರಾದ ವಿ.ಎನ್. ಮಂಜುನಾಥ್, ಹುಲಿಕೆರೆ ಸಂಪತ್‌ಕುಮಾರ್, ತಮ್ಮಯ್ಯಣ್ಣ, ಸಾವಿತ್ರಮ್ಮ, ಶಿವಯ್ಯ, ಲೋಕಿ, ನಟರಾಜ್, ರಮೇಶ್, ಗಂಗಯ್ಯ, ಎಂ.ಆರ್. ಕೃಷ್ಣಪ್ಪ, ಶಂಕರ್, ರಾಜೇಶ್ ಇತರರು ಇದ್ದರು.