ಚನ್ನರಾಯಪಟ್ಟಣದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅಂಗವಿಕಲರಿಗೆ ದ್ವಿಚಕ್ರ ವಾಹನ ಹಾಗೂ ಪರಿಕರಗಳನ್ನು ವಿತರಿಸಿದರು. ಜಿ.ಆರ್.ಹರೀಶ್, ಉಮಾ ಶಂಕರ್, ಸುಬ್ರಹ್ಮಣ್ಯ, ಗಿರೀಶ್ ಇದ್ದರು.
ಚನ್ನರಾಯಪಟ್ಟಣ: ಮುಂದಿನ ದಿನಗಳಲ್ಲಿ ಶ್ರವಣದೋಷವುಳ್ಳವರಿಗೆ ಉಚಿತವಾಗಿ ಶ್ರವಣ ಸಾಧನ ವಿತರಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಪಂಚಾಯಿತಿ 2025-26ನೇ ಸಾಲಿನ ಅನಿಭರ್ಂಧಿತ ಅನುದಾನದಡಿ ಅಂಗವಿಕಲರಿಗೆ ತ್ರಿಚಕ್ರವಾಹನ ಹಾಗೂ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶ್ರವಣದೋಷವುಳ್ಳವರನ್ನು ಆರೋಗ್ಯ ತಂಡಗಳ ಸಹಯೋಗದೊಂದಿಗೆ ಗುರುತಿಸಲಾಗುತ್ತದೆ. ಗುರುತಿಸಿದ ಅರ್ಹ ಫಲಾನುಭವಿಗಳನ್ನು ಹೆಚ್ಚಿನ ಮೌಲ್ಯಮಾಪನ ಮತ್ತು ನಿರ್ವಹಣೆ ನಂತರ ಶ್ರವಣಸಾಧನ ವಿತರಣೆ ಮಾಡಲಾಗುವುದು ಎಂದು ಹೇಳಿದರು.
12.5 ಲಕ್ಷ ರೂ.ದ ಮೌಲ್ಯದ ವಾಹನ ಹಾಗೂ ಪರಿಕರಗಳನ್ನು ವಿತರಿಸಲಾಗುತ್ತಿದೆ. ಪ್ರತಿಯೊಬ್ಬರೂ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು. ಅಂಗವಿಕಲರ ಬದುಕು ಸುಧಾರಣೆಗೆ ತ್ರಿಚಕ್ರ ವಾಹನಗಳು ಸಹಕಾರಿಯಾಗಲಿವೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಸಹಾಯಕ ನಿರ್ದೇಶಕ ಗಿರೀಶ್, ತಾಲೂಕು ವಿಶೇಷ ಚೇತನರ ಸಂಯೋಜಕ ಸುಬ್ರಹ್ಮಣ್ಯ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಶಂಕರ್ ಭಾಗವಹಿಸಿದ್ದರು.