ತಾಲೂಕಿನ ಕಣಕಟ್ಟೆ ಹೋಬಳಿಯ ಹಿರೀಸಾದರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ನ್ಯಾಯಾಧೀಶ ಕಿರಣ್ ಕುಮಾರ್ ಡಿ ವಡಗೇರಿ ಉದ್ಘಾಟಿಸಿದರು. ಕೊಟ್ಟೋರಪ್ಪ, ಸದಾನಂದ, ಪ್ರಕಾಶ್, ವಿರೂಪಾಕ್ಷಪ್ಪ, ಸಿದ್ದಮಲ್ಲಪ್ಪ, ಮೂರ್ತಿ, ಹನುಮೇಶ್ ಇತರರು ಇದ್ದರು.
- ವಾರ್ಷಿಕ ವಿಶೇಷ ಶಿಬಿರ
- ಹೀರಿಸಾದರಹಳ್ಳಿಯಲ್ಲಿ ಶಿಬಿರ
* ನ್ಯಾಯಾಧೀಶ ಕಿರಣ್‌ಕುಮಾರ್ ಡಿ ವಡಗೇರಿ ಕಿವಿಮಾತು
* ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ
ವಿಜಯವಾಣಿ ಸುದ್ದಿಜಾಲ ಅರಸೀಕೆರೆ ಗ್ರಾಮಾಂತರ
ಮಕ್ಕಳು ಮಾದಕ ದ್ರವ್ಯ ಮತ್ತು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಾಸಂಗ ಮಾಡಿ ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಅರಸೀಕೆರೆ ಜೆಎಂಎಫ್‌ಸಿ ನ್ಯಾಯಾಧೀಶ ಕಿರಣ್ ಕುಮಾರ್ ಡಿ ವಡಗೇರಿ ಕಿವಿಮಾತು ಹೇಳಿದರು.
ತಾಲೂಕಿನ ಕಣಕಟ್ಟೆ ಹೋಬಳಿ ಹೀರಿಸಾದರಹಳ್ಳಿಯಲ್ಲಿ ಶ್ರೀ ವಿದ್ಯಾರಣ್ಯ ಪದವಿಪೂರ್ವ ಕಾಲೇಜಿನ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಬಾಲ್ಯ ವಿವಾಹ ಪದ್ಧತಿ ಹಾಗೂ ಇತರ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಈ ಮೂಲಕ ಪಾಲಕರಿಗೆ, ಶಿಕ್ಷಣ ಸಂಸ್ಥೆಗೆ ಹೆಸರು ತರಬೇಕು ಎಂದು ಹೇಳಿದರು.
ವಕೀಲ ಸಿದ್ದಮಲ್ಲಪ್ಪ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಲು ಇಂದಿನ ವಿದ್ಯಾರ್ಥಿಗಳು ಕಾನೂನು ಅರಿವು ಅತ್ಯಗತ್ಯ. ತಾವು ಅರಿತು ಇತರರಿಗೆ ಮಾರ್ಗದರ್ಶನ ಆಗಬೇಕು ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಚ್.ಆರ್.ಕೊಟ್ಟೋರಯ್ಯ ಮಾತನಾಡಿ, ಮಕ್ಕಳು ಶಿಕ್ಷಣ ಜತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅರಸೀಕೆರೆ ವಕೀಲ ಸಂಘದ ಅಧ್ಯಕ್ಷ ಸದಾನಂದ್, ಕಾರ್ಯದರ್ಶಿ ಪ್ರಕಾಶ್, ವಿರೂಪಾಕ್ಷಪ್ಪ, ಶಿಬಿರಾಧಿಕಾರಿ ಕೆ.ಎಸ್.ಮೂರ್ತಿ, ಹನುಮೇಶ್ ಇತರರು ಇದ್ದರು.