ಹೊಳೆನರಸೀಪುರ ಪಟ್ಟಣದ ಕೋಟೆ ಮುಖ್ಯರಸ್ತೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. 
ಹಾಸನ

ಕೋಟೆ ಮುಖ್ಯರಸ್ತೆಯಲ್ಲಿ ವ್ಯಾಪಾರ ಜೋರು

ಹೊಳೆನರಸೀಪುರ:

ಪಟ್ಟಣದ ಮಾರುಕಟ್ಟೆಯಲ್ಲಿ ವರ ಮಹಾಲಕ್ಷ್ಮೀ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಮಹಿಳೆಯರು, ಯುವತಿಯರು ಮುಂದಾಗಿದ್ದರು.

ಕೋಟೆಯ ಮುಖ್ಯರಸ್ತೆ, ಕವರ್ ಡೆಕ್, ಜಯಚಾಮರಾಜೇಂದ್ರ ವೃತ್ತ, ಸುಭಾಷ್ ವೃತ್ತದಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಹೆಚ್ಚು ಜನ ದಟ್ಟಣೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಮಹಿಳೆಯರು ಹಬ್ಬಕ್ಕೆ ಸಂಭ್ರಮದಿಂದ ಅಗತ್ಯ ವಸ್ತುಗಳನ್ನು ಖರೀದಿಸಿದರು.