ಚನ್ನರಾಯಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ಚಾಲನೆ ನೀಡಿದರು. ಮನೋಹರ್, ಚ.ನಾ.ಅಶೋಕ್, ಎಂ.ಎನ್.ಕಾಂತರಾಜ್, ಸೋಮೇಶ್ ರವಿ ಇರೋಜಿ, ಆದಿತ್ಯ ಶೆಟ್ಟಿ, ಸ್ಮಿತಾ ಗೌಡ, ಮಮತಾ ಚೌದರಿ, ವರುಣ್ ಪುರಾಣಿಕ್, ಸ್ಫೂರ್ತಿ, ಜೀವನ್, ಆದಿತ್ಯ, ಜಗದೀಶ್ ಇದ್ದರು.
ಚನ್ನರಾಯಪಟ್ಟಣ: ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡಬೇಕೆನ್ನುವುದು ಎಬಿವಿಪಿ ಅಚಲ ನಂಬಿಕೆ ಎಂದು ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಶುಕ್ರವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಜನಪ್ರಿಯ ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವ ಸಂಘಟನೆಗಳು ಈ ದೇಶದ ಮಣ್ಣಿಗೆ ಪೂರಕವಾಗಿ ಕೆಲಸ ಮಾಡುತ್ತವೆಯೋ ಆ ಸಂಘಟನೆಗಳು ಬಾನೆತ್ತರಕ್ಕೆ ಬೆಳೆಯುತ್ತವೆ ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅದರಂತೆ ಎಬಿವಿಪಿ ಕೆಲಸ ಮಾಡುತ್ತಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದರು.
ಆರ್‌ಎಸ್‌ಎಸ್ ಮುಖಂಡ ಮನೋಹರ್ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಏಕತೆ ಹಾಗೂ ಸಾಮಾಜಿಕ ಹಿತಾಸಕ್ತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಂಘಟನೆಯ ಬೆಳವಣಿಗೆಯ ಪಯಣ ಹಾಗೂ ಪ್ರಮುಖ ಸಾಧನೆಗಳ ಕುರಿತು ಅವರು ಮಾಹಿತಿ ನೀಡಿದರು.
ಪರಿಸರ ಪ್ರೇಮಿ ಚ.ನಾ.ಅಶೋಕ್ ಮಾತನಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಸಭಾಪತಿ ಎಚ್.ಜಿ. ಭರತ್‌ಕುಮಾರ್, ಕಾರ್ಯದರ್ಶಿ ಸಿ.ಎನ್.ಜಬಿವುಲ್ಲಾ ಬೇಗ್, ಎಬಿವಿಪಿಯ ಜಿಲ್ಲಾ ಪ್ರಮುಖ ಎಂ.ಎನ್.ಕಾಂತರಾಜ್, ನಗರ ಪ್ರಮುಖ ಸೋಮೇಶ್, ಶಿವಮೊಗ್ಗ ವಿಭಾಗ ಸಂಚಾಲಕ್ ರವಿ ಇರೋಜಿ, ವಿಭಾಗ ಸಂಘಟನಾ ಕಾರ್ಯದರ್ಶಿ ಆದಿತ್ಯ ಶೆಟ್ಟಿ, ರಾಜ್ಯ ಕಾರ್ಯ ಸಮಿತಿ ಸದಸ್ಯ ಸ್ಮಿತಾ ಗೌಡ, ವಿಭಾಗ ವಿದ್ಯಾರ್ಥಿನಿ ಪ್ರಮುಖ ಮಮತಾ ಚೌದರಿ, ಹಾಸನ ಜಿಲ್ಲಾ ಸಂಚಾಲಕ್ ವರುಣ್ ಪುರಾಣಿಕ್, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಸ್ಫೂರ್ತಿ,ಜೀವನ್, ಆದಿತ್ಯ, ಜಗದೀಶ್ ಸೇರಿದಂತೆ ಕಾರ್ಯಕರ್ತರು ಹಾಗೂ ಜನಪ್ರಿಯ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.