ತೋಟಗಾರಿಕೆ ಪಿತಾಮಹ ಡಾ.ಮರಿಗೌಡರ ಜನ್ಮದಿನದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಗಣ್ಯರು ಗಿಡಗಳನ್ನು ನೆಟ್ಟರು. ಅಡಗೂರು ಬಸವರಾಜು, ಎಂ.ಆರ್.ಲೋಹಿತ್ ಇತರರು ಇದ್ದರು. 
ಹಾಸನ

ತೋಟಗಾರಿಕೆ ಪಿತಾಮಹ ಡಾ.ಮರಿಗೌಡರ ಜನ್ಮದಿನಾಚರಣೆ

ಪ್ರಮುಖ ಮುಖ್ಯಾಂಶಗಳು

  • Dr. Mari Gowda

ಬೇಲೂರು:

ಪಟ್ಟಣದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಶನಿವಾರ ಗಿಡಗಳನ್ನು ನೆಟ್ಟು ಹಾಗೂ ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ತೋಟಗಾರಿಕೆ ಪಿತಾಮಹ ಡಾ.ಮರಿಗೌಡರ ಜನ್ಮದಿನ ಆಚರಿಸಲಾಯಿತು.

ತೋಟಗಾರಿಕಾ ಸಹಾಯಕ ನಿರ್ದೇಶಕ ಕೆ.ಎಸ್.ಮಧುಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೋಬ್ಬರ ಕರ್ತವ್ಯ. ನಾವು ನೆಡುವ ಒಂದೊಂದು ಗಿಡವು ನಮ್ಮ ಮುಂದಿನ ಪೀಳಿಗೆಗೆ ಹೊಸದೊಂದು ಸಂದೇಶ ನೀಡುವಂತಿರಬೇಕು. ಅಲ್ಲದೆ ತೋಟಗಾರಿಕೆ ಕ್ಷೇತ್ರದ ಪಿತಾಮಹ ಡಾ.ಮರಿಗೌಡರ ಜನ್ಮದಿನದ ಹಿನ್ನೆಲೆಯಲ್ಲಿ ರೈತರಿಗೆ ಹಣ್ಣಿನ ಗಿಡಗಳನ್ನು ವಿತರಿಸುವ ಜತೆಗೆ ನಮ್ಮ ಕಚೇರಿ ಆವರಣದಲ್ಲೂ ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡುವಂತೆ ಎಲ್ಲರಿಗೂ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲೆಲ್ಲಿ ಸ್ಥಳವಕಾಶ ಸಿಗುತ್ತದೆಯೋ ಅಲ್ಲೆಲ್ಲ ಸಾಧ್ಯವಾದಷ್ಟು ಗಿಡಗಳನ್ನು ನೆಡುವುದರ ಜತೆ ಮರ, ಕಾಡು, ಅರಣ್ಯಗಳ ರಕ್ಷಣೆ ನಮ್ಮಗಳ ಹೊಣೆಯಾಗಬೇಕು. ರೈತರು ತೋಟಗಾರಿಕೆ ಬೆಳೆಗಳತ್ತ ಹೆಚ್ಚಿನ ಆಸಕ್ತಿ ವಹಿಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಖು ಎಂದು ಮನವಿ ಮಾುಡಿದರು.
ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಡಗೂರು ಬಸವರಾಜು, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ಅಧಿಕಾರಿ ಎಂ.ಆರ್.ಲೋಹಿತ್, ಕ್ಷೇತ್ರಾಧಿಕಾರಿ ಜಗದೀಶ್, ತಾಲೂಕು ಛಾಯಾಗ್ರಾಹಕರ ಸಂಘ್ ಅಧ್ಯಕ್ಷ ಚಂದ್ರಶೇಖರ್ ಹಾಗೂ ರೈತರು ಇದ್ದರು.