ಜ.20 ರಂದು ನಗರದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಡಿಸಿ ಲತಾ ಕುಮಾರಿ ಚಾಲನೆ ನೀಡಿದರು. ಎಚ್.ಕೆ.ಸಂದೇಶ್, ಕೃಷ್ಣದಾಸ್, ಅಂಬುಗ ಮಲ್ಲೇಶ್, ಹೆತ್ತೂರು ನಾಗರಾಜ್, ರಾಜೇಶ್, ಶಿವಮ್ಮ ಇತರರಿದ್ದರು. 
ಹಾಸನ

ಭೀಮ ಕೋರೆಗಾಂವ್ ವಿಜಯೋತ್ಸವ ಪ್ರಯುಕ್ತ ಬೈಕ್ ರ‌್ಯಾಲಿ

ಪ್ರಮುಖ ಮುಖ್ಯಾಂಶಗಳು

  • ಭೀಮ ಕೋರೆಗಾಂವ್ ವಿಜಯೋತ್ಸವ ಪ್ರಯುಕ್ತ ಬೈಕ್ ರ‌್ಯಾಲಿ
  • ಜಾಥಾಕ್ಕೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಚಾಲನೆ
ಹಾಸನ: ನಗರದಲ್ಲಿ ಜ.20 ರಂದು ಭೀಮ ಕೋರೆಗಾಂವ್ ವಿಜಯೋತ್ಸವ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಬುಧವಾರ ಬೈಕ್ ರ‌್ಯಾಲಿ ನಡೆಸಲಾಯಿತು.
ಡಿಸಿ ಕಚೇರಿ ಮುಂಭಾಗದಿಂದ ಶುರುವಾದ ಜಾಥಾಕ್ಕೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಚಾಲನೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಜಾಥಾದಲ್ಲಿ ನೂರಾರು ಸಂಖ್ಯೆಯ ಸಮುದಾಯದ ಮುಖಂಡರು ಭಾಗವಹಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜ.20 ರಂದು ನಗರದಲ್ಲಿ ಅದ್ದೂರಿಯಾಗಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಸಮಿತಿ ಮುಂದಾಗಿರುವುದು ಮತ್ತು ಮೊಟ್ಟ ಮೊದಲ ಬಾರಿಗೆ ಹಾಸನಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದರು.
ಭೀಮ ಕೋರೆಗಾಂವ್ ಒಂದು ಐತಿಹಾಸಿಕ ಹೋರಾಟವಾಗಿದೆ. ಕಡಿಮೆ ಸಂಖ್ಯೆಯ ತಳ ಸಮುದಾಯ ತಮ್ಮ ಹಕ್ಕಿಗಾಗಿ ದೊಡ್ಡ ಸಂಖ್ಯೆಯ ಬಲಾಢ್ಯರ ಜತೆ ಯುದ್ಧ ಮಾಡಿ ಜಯಗಳಿಸಿದ ಐತಿಹಾಸಿಕ ಹೋರಾಟದ ವಿಜಯದ ದಿನವಾಗಿದೆ ಎಂದು ಸ್ಮರಿಸಿದರು. ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜನೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಆಯೋಜನಾ ಸಮಿತಿಯ ಎಚ್.ಕೆ.ಸಂದೇಶ್, ಕೃಷ್ಣದಾಸ್, ಅಂಬುಗ ಮಲ್ಲೇಶ್, ಹೆತ್ತೂರು ನಾಗರಾಜ್, ರಾಜೇಶ್, ಶಿವಮ್ಮ, ಗೊರೂರು ರಾಜು, ರಂಜಿತ್ ಗೊರೂರು, ಲೀಲಾವತಿ, ಭಾಗ್ಯಾ ಕಲೀವಿರ್, ಕಾರ್ಯದರ್ಶಿ ತೇಜೂರು ಮಂಜು, ಹಾಚಗೋಡನಹಳ್ಳಿ ಉಮೇಶ್,ರಾಜಶೇಖರ್, ವೆಂಕಟೇಶ್ ಬ್ಯಾಕರವಳ್ಳಿ, ಜಗದೀಶ್ ಚೌಡಹಳ್ಳಿ, ಗೋವಿಂದರಾಜು, ಮಣಿಕಂಠ, ದೇವರಾಜು, ಪ್ರದೀಪ್, ನವೀನ್, ರಾಮು, ತೋಟೇಶ್, ಪ್ರಸನ್ನ, ಭಾನುಪ್ರಕಾಶ್ ಇತರರಿದ್ದರು.