ಬಾಣಾವರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು. ನೀಲಕಂಠ, ಶಾರದಮ್ಮ, ವೆಂಕಟೇಶ್, ಚಂದ್ರು, ರೋಹಿಣಿ, ಕವಿತಾ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ: ಬಾಣಾವರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶ್ರೀ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬಸವೇಶ್ವರರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ಮಾತನಾಡಿದ ಪಪಂ ಮುಖ್ಯಾಧಿಕಾರಿ ನೀಲಕಂಠ, ಸಮಾನತೆಯನ್ನು ವಿಶ್ವಕ್ಕೆ ಸಾರಿದ ಬಸವಣ್ಣ ವಿಶ್ವಗುರುವಾಗಿದ್ದಾರೆ. ಜಾತಿ, ಧರ್ಮ, ಕುಲ ಇವುಗಳನ್ನೆಲ್ಲ ತೊಡೆದುಹಾಕಿ ಮನುಷ್ಯ ಜಾತಿ ಒಂದೇ ಎಂದು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾವಿರಾರು ವರ್ಷಗಳ ಹಿಂದೆಯೇ ಸಾರಿದ್ದಾರೆ ಎಂದು ಬಣ್ಣಿಸಿದರು.
ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಬಿ.ಎಲ್.ವೆಂಕಟೇಶ್, ಸಿಬ್ಬಂದಿ ರಾಜಪ್ಪ ಹಾಲಪ್ಪ ಚಂದ್ರಶೇಖರ್, ಚಂದ್ರು ರೋಹಿಣಿ ಹಾಗೂ ಗ್ರಂಥಪಾಲಕಿ ಕವಿತಾ ಮಹದೇವಿ ಉಪಸ್ಥಿತರಿದ್ದರು. ಪಟ್ಟಣದ ರೈತ ಸಂಪರ್ಕ ಕೇಂದ್ರ, ಉಪ ನೋಂದಣಾಧಿಕಾರಿಗಳ ಕಚೇರಿ, ಸೆಸ್ಕ್ ಸೇರಿದಂತೆ ಎಲ್ಲ ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಶ್ರೀ ಬಸವೇಶ್ವರರ ಜಯಂತಿಯನ್ನು ಆಚರಿಸಲಾಯಿತು.