ಅರಸೀಕೆರೆ ಗ್ರಾಮಾಂತರ: ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಶ್ರೀ ಕಟ್ಟೆಮನೆ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ ಮಹೋತ್ಸವ ಆಚರಿಸಲಾಯಿತು. 
ಹಾಸನ

ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ ಮಹೋತ್ಸವ

ಅರಸೀಕೆರೆ ಗ್ರಾಮಾಂತರ: ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಶ್ರೀ ಕಟ್ಟೆಮನೆ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ ಮಹೋತ್ಸವ ಆಚರಿಸಲಾಯಿತು.
ಶುಕ್ರವಾರ ಬನದ ಹುಣ್ಣಿಮೆ ಅಂಗವಾಗಿ ಹೊಳೆ ಪೂಜೆ, ಅಮ್ಮನವರಿಗೆ ಕುಂಭಾಭಿಷೇಕ ಹಾಗೂ ಮಹಾಮಂಗಳಾರತಿ ಸೇವೆ ನೆರವೇರಿಸಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಶನಿವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಂಗೆಯನ್ನು ತಂದು ಪಂಚಾಮೃತ ಅಭಿಷೇಕ ನೆರವೇರಿಸಿ, ಹರಿದ್ರ ಕುಂಕುಮ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ಶ್ರೀಚಕ್ರ ಆರಾಧನೆ ವಿಶೇಷವಾಗಿ ಮಹಾ ಚಂಡಿಕಾ ಹೋಮ ನೆರವೇರಿಸಲಾಯಿತು. ನಂತರ ಶ್ರೀ ಬನಶಂಕರಿ ಅಮ್ಮನವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಬಿ.ಎಸ್.ವಿಶ್ವನಾಥ್, ಅಧ್ಯಕ್ಷ ಬಿ.ಎನ್.ಗಿರೀಶ್, ಉಪಾಧ್ಯಕ್ಷ ಅದಿನಾರಾಯಣ್, ಖಜಾಂಚಿ ಉಮೇಶ್, ಕಾರ್ಯದರ್ಶಿ ಸತ್ಯನಾರಾಯಣ್, ಸಹ ಕಾರ್ಯದರ್ಶಿ ಬಿ.ಎಂ.ರವಿ, ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.