ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಬಾ 2ರ ಕ್ಲಸ್ಟರ್ ಮಟ್ಟದ ಶಾಲೆಗಳ ಎಸ್.ಡಿ.ಎಂ.ಸಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್ ನೆನಪಿನ ಕಾಣಿಕೆ ನೀಡಿದರು.  
ಹಾಸನ

ಎಸ್‌ಡಿಎಂಸಿ ಅಧಿಕಾರ ವ್ಯಾಪ್ತಿಯ ಅರಿವು ಅಗತ್ಯ

ಅರಕಲಗೂಡು: ತಾಲೂಕಿನ ಶಣವಿನಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕಸಬಾ 2ರ ಕ್ಲಸ್ಟರ್ ಮಟ್ಟದ ಶಾಲೆಗಳ ಎಸ್‌ಡಿಎಂಸಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಿ.ಆರ್.ಪಿ. ನಯಾಜ್ ಉಲ್ಲಾ, ಸರ್ಕಾರಿ ಶಾಲೆಯ ಪ್ರಗತಿಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ, ಪಾತ್ರ, ಪ್ರಾಧಾನ್ಯತೆ ಮತ್ತು ಅಧಿಕಾರ ವ್ಯಾಪ್ತಿಯ ಕುರಿತು ಮಾಹಿತಿ ಪಡೆದುಕೊಳ್ಳುವುದು ಒಳಿತು ಎಂದರು.
ಜಿ.ಪಿ.ಟಿ. ಶಿಕ್ಷಕ ಎಂ.ಎಲ್.ಸಾಗರ್ ಮಾತನಾಡಿ, ಎಸ್‌ಡಿಎಂಸಿ ಕಾರ್ಯಗಳು, ಮೇಲುಸ್ತುವಾರಿಯ ನಿಯಮಗಳು, ಅನುದಾನ ಸದ್ಬಳಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಸುಧಾರಣೆಗೆ ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯ ಸಂತೋಷ್ ಶಣವಿನಕುಪ್ಪೆ ಮಾತನಾಡಿ, ಇಂತಹ ಜನಪ್ರಿಯ ಕಾರ್ಯಕ್ರಮಗಳು ನಡೆಯುವುದು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಯಾಸ್ಮಿನ್ ತಾಜ್, ಹಿರಿಯ ಶಿಕ್ಷಕ ಪರಮೇಶ್, ಜಿಪಿಟಿ ಶಿಕ್ಷಕಿ ಎಸ್.ವಿ.ದಿವ್ಯಮಣಿ, ಹುಲ್ಲಂಗಾಲ ಶಾಲೆಯ ಮುಖ್ಯಶಿಕ್ಷಕ ನಂಜರಾಜ್, ಹುಲ್ಲಂಗಾಲ ಕ್ಲಸ್ಟರ್ ಶಾಲೆಗಳ ಎಲ್ಲ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸಮಿತಿಗಳ ಸದಸ್ಯರು, ಗ್ರಾಮದ ಪುಟ್ಟರಾಜು, ಭೀಮಣ್ಣ, ಕಾವ್ಯ, ರಾಧಾಮಣಿ, ಪಾರ್ವತಿ, ಜಯಮ್ಮ ಇತರರು ಇದ್ದರು. ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿದರು.