ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಏರ್ಪಡಿಸಿದ್ದ ನೇತ್ರ ತಪಾಸಣೆ ಉಚಿತ ಶಿಬಿರವನ್ನು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಉದ್ಘಾಟಿಸಿದರು. ಆಶಾರಾಣಿ ರಾಮಸ್ವಾಮಿ, ವಿಜಯ್, ಪ್ರದೀಪ್ ರಾಮಸ್ವಾಮಿ, ಶ್ರೀನಿಧಿ, ಪಾಂಡುರಂಗ ಇತರರಿದ್ದರು. 
ಹಾಸನ

ಕಣ್ಣಿನ ಆರೋಗ್ಯ ಜನರಲ್ಲಿ ಜಾಗೃತಿ ಅಗತ್ಯ

ಅರಕಲಗೂಡು: ಜನರ ಕಣ್ಣಿನ ಆರೋಗ್ಯ ಕಾಪಾಡಲು ತಪಾಸಣಾ ಶಿಬಿರಗಳು ಉಪಯುಕ್ತವಾಗಿವೆ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.
ತಾಲೂಕಿನ ರಾಮನಾಥಪುರದ ಭಾಗ್ಯಶ್ರೀ ಕಲ್ಯಾಣ ಮಂಟಪದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಣ್ಣಿನ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕಣ್ಣಿನ ದೃಷ್ಟಿ ಮುಖ್ಯವಾಗಿದ್ದು ಜನರಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಶಿಬಿರಗಳಲ್ಲಿ ಉಚಿತವಾಗಿ ಕಣ್ಣಿನ ಪರೀಕ್ಷೆ, ದೃಷ್ಟಿ ತಪಾಸಣೆ ಮತ್ತು ಕಣ್ಣಿನ ಕಾಯಿಲೆಗಳ ಪತ್ತೆ ಮಾಡಲಾಗುತ್ತಿದ್ದು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಂಪರ್ಕಾಧಿಕಾರಿ ವಿಜಯ್ ಮಾತನಾಡಿ, ಕಣ್ಣಿನ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಬೇಕು. ವಿದ್ಯಾರ್ಥಿಗಳು, ವೃದ್ಧರು ಮತ್ತು ಗ್ರಾಮೀಣ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಅಗತ್ಯವಿದ್ದರೆ ಕನ್ನಡಕ ವಿತರಣೆ ಅಥವಾ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. ದೃಷ್ಟಿ ಪರೀಕ್ಷೆ, ಕಣ್ಣಿನ ಒತ್ತಡ ಪರೀಕ್ಷೆ, ಮಕ್ಕಳ ಕಣ್ಣಿನ ಪರೀಕ್ಷೆ, ವೈದ್ಯರ ಸಲಹೆ ಪಡೆದುಕೊಳ್ಳಬಹುದು. ಮಧುಮೇಹ ಮತ್ತು ರಕ್ತದೊತ್ತಡ ಇರುವವರು ಹಾಗೂ ಜನರಿಗೆ ಆರೋಗ್ಯಕರ ದೃಷ್ಟಿ ಕಾಪಾಡಲು ಶಿಬಿರ ಸಹಾಯಕವಾಗಿದೆ ಎಂದು ತಿಳಿಸಿದರು.
ಸ್ವಸ್ಥ ಸಮಾಜ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರದೀಪ್ ರಾಮಸ್ವಾಮಿ, ಆಶಾರಾಣಿ ರಾಮಸ್ವಾಮಿ, ಲೇಖಕ ಉಡುವಾರೆ ಸುಂದರೇಶ್, ತಾಪಂ ಮಾಜಿ ಸದಸ್ಯರಾದ ಎಂ.ಟಿ. ಪಾಂಡುರಂಗ, ಬಿ.ಸಿ. ವೀರೇಶ್, ಸಿದ್ದರಾಮೇಗೌಡ, ನಿವೃತ್ತ ಪ್ರಾಂಶುಪಾಲ ಬಸವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಶ್ರೀನಿಧಿ, ದಿವಾಕರ್, ಕೋಟವಾಳು ವಿರೂಪಾಕ್ಷ, ಬಿಳಗೂಲಿ ಕಾಳೇಗೌಡ, ನೇತ್ರ ತಜ್ಞರಾದ ಡಾ. ಜಯಕುಮಾರ್, ಡಾ.ಲಿಯೋ ಸೋನಿ, ಡಾ.ಅನಾರಗ್ ತಾರಕ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಪುನೀತ್ ಮತ್ತು ಸಿಬ್ಬಂದಿ ಇತರರಿದ್ದರು.