ಹೊಳೆನರಸೀಪುರ ತಾಲೂಕಿನ ಛಾಯಾಗ್ರಾಹಕರ ಸಂಘದಿಂದ ಕೆಪಿಎ ಆಸರೆ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಸ್ವಾಮಿ, ಲೋಕೇಶ್, ಧನ್ಯಕುಮಾರ್ ಇತರರು ಇದ್ದರು.  
ಹಾಸನ

ಛಾಯಾಚಿತ್ರಗ್ರಾಹಕರಿಗೆ ‘ಆಸರೆ’ ಯೋಜನೆ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • photographers
ಹೊಳೆನರಸೀಪುರ: ತಾಲೂಕು ಛಾಯಾಚಿತ್ರಗ್ರಾಹಕ ಸಂಘದ ಸದಸ್ಯರು ಅಕಾಲಿಕ ಮೃತ್ಯುವಾದರೆ ಅವರ ಕುಟುಂಬಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ವಿಶೇಷ ನಿಧಿ ಸ್ಥಾಪಿಸುವ ಯೋಜನೆಗೆ ಸಂಘದ ಜಿಲ್ಲಾಧ್ಯಕ್ಷ ಸ್ವಾಮಿ ಚಾಲನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಛಾಯಾಚಿತ್ರ ಗ್ರಾಹಕರಿಗೆ ನೋಂದಾಯಿತ ಸಂಘದಡಿ ಸದಸ್ಯತ್ವ ನೀಡಲಾಗುವುದು. ಈ ಸದಸ್ಯರು ಮರಣ ಹೊಂದಿದರೆ ಆಸರೆ ಯೋಜನೆಯಡಿ ಮೃತ ಸದಸ್ಯನ ಕುಟುಂಬಕ್ಕೆ ಪರಿಹಾರವಾಗಿ 1 ಲಕ್ಷ ರೂ. ದೊರಕಿಸಿಕೊಡಲಾಗುವುದು. ಸಂಘದ ಸದಸ್ಯರೇ ಪ್ರತಿ ತಿಂಗಳು ನೀಡುವ ದೇಣಿಗೆಯಲ್ಲಿ ಪರಿಹಾರ ನಿಧಿ ಸ್ಥಾಪಿಸಲಾಗಿದೆ. ನಂತರದಲ್ಲಿ ಇದರ ಮೊತ್ತ ಹೆಚ್ಚಳವಾಗುವ ವಿಶ್ವಾಸ ಇದೆ ಎಂದರು.
ಕೆಪಿಎ ಯೋಜನೆಯ ಜಿಲ್ಲಾಧ್ಯಕ್ಷ ಲೋಕೇಶ್, ಜಿಲ್ಲಾ ಕಾರ್ಯದರ್ಶಿ ಧನ್ಯಕುಮಾರ್, ರಾಜ್ಯ ಸಂಘದ ನಿರ್ದೇಶಕ ಕೊನೇರಿ ಸೂರಿ, ಅಭಿಲಾಷ್, ವಿನಾಯಕ, ನರಸಿಂಹ ಹಾಗೂ ಪ್ರಮೋದ್ ಹಾಜರಿದ್ದರು.