ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕಕಲ್ಯಾಣಾರ್ಥ ಹಮ್ಮಿಕೊಂಡಿದ್ದ ನವಚಂಡಿಯಾಗ ಕಾರ್ಯಕ್ರಮದಲ್ಲಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಪಾಲ್ಗೊಂಡಿದ್ದರು. 
ಹಾಸನ

ವಿಶ್ವದೆಲ್ಲೆಡೆ ಅಶಾಂತಿ ಕಾರ್ಮೋಡ ದೂರವಾಗಲಿ

ಲಲಾಟಾಕ್ಷ ಎಸ್
ಅರಸೀಕೆರೆ ಗ್ರಾಮಾಂತರ: ಸರ್ವೇ ಜನ ಸುಖೀನೋ ಭವಂತು ಎನ್ನುವ ಉದಾತ್ತ ಚಿಂತನೆ ಸನಾತನ ಹಿಂದೂ ಸಂಸ್ಕೃತಿಯ ಪರಂಪರೆ ಆಗಿದೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ನಗರದ ಹೊರ ವಲಯದ ಗುಂಡುಕಾನಳ್ಳಿ ವ್ಯಾಪ್ತಿಗೆ ಸೇರಿದ ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವಚಂಡಿಕಾ ಹೋಮ ಸಮಾರಂಭದಲ್ಲಿ ಮಾತನಾಡಿ, ನಮ್ಮ ಭಾರತೀಯ ಸನಾತನ ಸಂಸ್ಕೃತಿಯು ಪ್ರಾಚೀನವಾಗಿದ್ದು, ಸರ್ವೇ ಜನ ಸುಖೀನೋ ಭವಂತು ಎನ್ನುವ ಉದಾತ್ತ ಚಿಂತನೆಯನ್ನು ಒಳಗೊಂಡಿದೆ. ನಮ್ಮ ಎಲ್ಲ ಧಾರ್ಮಿಕ ಸಮಾರಂಭ, ಹೋಮಗಳನ್ನು ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಿ ವಿಶ್ವದೆಲ್ಲೆಡೆ ಅಶಾಂತಿ ಕಾರ್ಮೋಡ ದೂರವಾಗಲಿ ಎಂದು ಆಶಿಸಿದರು.
ಅವಧೂತರಾದ ಸತೀಶ್ ಶರ್ಮ ಗುರೂಜಿ ಮಾತನಾಡಿದರು. ಕಣಕಟ್ಟೆ ಆದಿತ್ಯ ಶರ್ಮ ನೇತೃತ್ವದ ತಂಡ ಧಾರ್ಮಿಕ ವಿಧಾನಗಳನ್ನು ನೆರವೇರಿಸಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.