ಅರಸೀಕೆರೆ ನಗರಸಭೆ ಕಚೇರಿಯಲ್ಲಿ ಕೆ.ಎಸ್. ಲತಾಕುಮಾರಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವುದು. 
ಹಾಸನ

ತಡವಾಗಿ ಆರಂಭವಾದ ಬಜೆಟ್ ಪೂರ್ವಭಾವಿ ಸಭೆ

ಅರಸೀಕೆರೆ: ನಗರಸಭೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಬಹು ನಿರೀಕ್ಷಿತ ಬಜೆಟ್ ಪೂರ್ವಭಾವಿ ಸಭೆ ಬರೋಬ್ಬರಿ ನಾಲ್ಕು ತಾಸು ತಡವಾಗಿ ನಡೆಯಿತು.
ನಿಗದಿಯಂತೆ ಹನ್ನೊಂದು ಗಂಟೆಗೆ ಸಭೆ ಆರಂಭವಾಗಬೇಕಿತ್ತು. ಆದರೆ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಹೊಣೆ ಹೊತ್ತಿರುವ ಕೆ.ಎಸ್.ಲತಾ ಕುಮಾರಿ ಮಧ್ಯಾಹ್ನ ಮೂರು ಗಂಟೆ ಕಳೆದರೂ ನಗರಸಭೆಗೆ ಬಂದಿರಲಿಲ್ಲ.
ಕುಂದು ಕೊರತೆ ಹೇಳಲು ಆಗಮಿಸಿದ್ದ ಹಿರಿಯ ನಾಗರಿಕರು, ವಾರ್ಡ್ ನಿವಾಸಿಗಳು ಹಾಗೂ ಮಾಜಿ ಸದಸ್ಯರು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮನೆಗೆ ಮರಳಿದರು.
ಬಹು ಹೊತ್ತಿನ ಬಳಿಕ ಆಗಮಿಸಿದ ಕೆ.ಎಸ್.ಲತಾಕುಮಾರಿ, ನಗರ ನಿವಾಸಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿ ಅಗತ್ಯ ಮಾಹಿತಿ ಹಾಗೂ ಜನರ ಅಹವಾಲು ಸ್ವೀಕರಿಸಿ ಕೆಲ ನಿಮಿಷದಲ್ಲಿ ತೆರಳಿದರು.
ತೆರಿಗೆ ಪಾವತಿಸುವ ನಗರ ನಿವಾಸಿಗಳ ಸಮಸ್ಯೆ ಆಲಿಸುವ ಸಂಬಂಧ ಮತ್ತೂಂದು ಪೂರ್ವಭಾವಿ ಸಭೆ ಕರೆಯಬೇಕು ಎನ್ನುವ ಮಾತುಗಳು ಕೇಳಿಬಂದವೆ. ಪೌರಾಯುಕ್ತ ಕೃಷ್ಣಮೂರ್ತಿ, ರವಿಕುಮಾರ್ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಜರಿದ್ದರು.