ಅರಕಲಗೂಡು ತಾಲೂಕಿನ ಬಸವಾಪಟ್ಟಣಕ್ಕೆ ಆಗಮಿಸಿದ ಕಾಶಿ ಜಗದ್ಗುರು ಜ್ಞಾನ ಪೀಠದ ಡಾ. ಚಂದ್ರಶೇಖರ ವಿಶ್ವಾರಾಧ್ಯ ಶ್ರೀಗಳನ್ನು ಭಕ್ತರು ಸಂಭ್ರಮದಿಂದ ಸ್ವಾಗತಿಸಿದರು. ಶ್ರೀ ಡಾ. ಮಹೇಶ್ವರಚಾರ್ಯ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕೆಂಡಗಣ್ಣ, ರವಿ ಇತರರಿದ್ದರು.  
ಹಾಸನ

ಧರ್ಮ, ಸಂಸ್ಕೃತಿ ಪರಂಪರೆ ಉಳಿಸುವುದು ಪ್ರತಿಯೊಬ್ಬರ ಹೊಣೆ

ಅರಕಲಗೂಡು: ತಾಲೂಕಿನ ಬಸವಾಪಟ್ಟಣದ ಶ್ರೀ ಗಂಗಾದರೇಶ್ವರ ದೇವಸ್ಥಾನಕ್ಕೆ ಸೋಮವಾರ ಕಾಶಿ ಜಗದ್ಗುರು ಜ್ಞಾನ ಪೀಠದ ಡಾ. ಚಂದ್ರಶೇಖರ ವಿಶ್ವಾರಾಧ್ಯ ಶ್ರೀಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಭಕ್ತರು ಸಂಭ್ರಮದಿಂದ ಸ್ವಾಗತಿಸಿದರು. ಧರ್ಮ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಿಕೊಂಡು ಹೊಗುವುದು ಪ್ರತಿಯೊಬ್ಬರ ಹೊಣೆಯಾಗಿದೆ. ದೇವಸ್ಥಾನವು ಸುಂದರವಾಗಿ ನಿರ್ಮಾಣವಾಗಿದ್ದು, ಸಕಲರಿಗೂ ಒಳಿತು ಉಂಟಾಗಲಿ ಇದೇ ರೀತಿ ಧಾರ್ಮಿಕ ಕಾರ್ಯಗಳು ಮುಂದುವರೆಯುವಂತಾಗಲಿ ಎಂದು ಶ್ರೀಗಳು ಆಶಿಸಿದರು.
ನುಗ್ಗ್ಗೆಹಳ್ಳಿಯ ಪುರ ಮಠದ ಶ್ರೀ ಡಾ. ಮಹೇಶ್ವರಚಾರ್ಯ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ, ಮುಖಂಡರಾದ ಕೆಂಡಗಣ್ಣ, ರವಿ, ಚನ್ನಬಸಪ್ಪ, ಬಾಬು, ಕರಣೇಶ್, ಪರಮೇಶ್, ಬಸವರಾಜು, ರವಿಕುಮಾರ್, ಜ್ಯೋತಿ ರಮ್ಯಾ ರೇಖಾ, ನಂದನಿ, ಶುಭಾ, ಮೂರ್ತಿ ಅಪೂರ್ವ ಶ್ರೀ ದಾಕ್ಷಯಣಿ ಅಂಬಿಕ, ಸಿಂದೂ, ಬಿಂದೂ ಇತರರಿದ್ದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.