ಅರಕಲಗೂಡು ಕ್ರಿಸ್ತಜ್ಯೋತಿ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು. 
ಹಾಸನ

ನೇತ್ರ ತಪಾಸಣೆಗೆ ಒಳಗಾದ 200 ಜನರು

ಅರಕಲಗೂಡು: ಪಟ್ಟಣದ ಕ್ರಿಸ್ತಜ್ಯೋತಿ ಶಾಲೆಯಲ್ಲಿ ಶುಕ್ರವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ಇಲಾಖೆ, ಹಾಸನದ ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅಮ್ಮ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಶಿಬಿರದಲ್ಲಿ 200 ಜನರಿಗೆ ಕಣ್ಣಿನ ತಪಾಸಣೆ, 150 ಜನರಿಗೆ ಮೂಳೆ,119 ಜನರಿಗೆ ಜನರಲ್, 80 ಮಹಿಳೆಯರು, 159 ಮಂದಿ ಬಿಪಿ, ಶುಗರ್ ಮತ್ತು 230 ವಿದ್ಯಾರ್ಥಿಗಳ ರಕ್ತ ಗುಂಪು ಪರೀಕ್ಷೆ ನಡೆಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ಡಾ.ಉಮೇಶ್, ಡಾ.ರಾಕೇಶ್, ಡಾ.ಸಂದೀಪ್ ಜನರ ತಪಾಸಣೆ ನಡೆಸಿದರು.