ಅರಕಲಗೂಡು ತಾಲೂಕಿನ ಚಿಕ್ಕ ಅರಕಲಗೂಡು ಗ್ರಾಮದಲ್ಲಿ ಶುಕ್ರವಾರ ಉದ್ಘಾಟನೆಯಾದ ಶ್ರೀಮಾರಮ್ಮ ದೇವಿ ದೇವಸ್ಥಾನದ ಪೂಜಾ ಕಾರ್ಯದಲ್ಲಿ ಶಾಸಕ ಎ.ಮಂಜು, ಭಕ್ತರು ಪಾಲ್ಗೊಂಡಿದ್ದರು. 
ಹಾಸನ

ಶ್ರೀಮಾರಮ್ಮ ದೇವಿ ದೇವಸ್ಥಾನ ಉದ್ಘಾಟನೆ

ಅರಕಲಗೂಡು: ತಾಲೂಕಿನ ಚಿಕ್ಕ ಅರಕಲಗೂಡು ಗ್ರಾಮದಲ್ಲಿ ಶ್ರೀಮಾರಮ್ಮ ದೇವಿ ದೇವಸ್ಥಾನ ಶುಕ್ರವಾರ ಉದ್ಘಾಟಿಸಲಾಯಿತು.
ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ಸಂಜೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾವಾಚನ, ದೇವನಾಂದಿ, ಕಲಸ ಪ್ರತಿಷ್ಠಾನೆ, ನವಗ್ರಹ ಮೃತ್ಯುಂಜಯ ಪೂಜೆ, ವನಸ್ಪತಿ ಅಭಿಷೇಕ, ಅದಿವಾಸವಾಸ್ತು, ಹೋಮ, ಪೂರ್ಣಾಹುತಿ ಹಾಗೂ ಶುಕ್ರವಾರ ಬೆಳಗ್ಗೆ ಕಲಶ ಪೂಜೆ, ಗೋಪೂಜೆ, ದೇವಾಲಯ ಪ್ರವೇಶ, ಶ್ರೀಮಾರಮ್ಮ ದೇವಿಗೆ ಪ್ರಾಣ ಪ್ರತಿಷ್ಠಾಪನೆ ನಂತರ ಫಲ ಪಂಚಾಮೃತ ಅಭಿಷೇಕ, ಅಲಂಕಾರ ಗೋಪುರ ಕಲಶ ಸ್ಥಾಪನೆ, ಮಹಾಮಂಗಳಾರತಿ ನಡೆಯಿತು. ಅಪಾರ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಅರೇಮಾದನಹಳ್ಳಿ ಮಠದ ಶ್ರೀಶಿವಸುಜ್ಞಾನ ಘನತೀರ್ಥ ಸ್ವಾಮೀಜಿ, ಶಾಸಕ ಎ.ಮಂಜು, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಮುಖಂಡರಾದ ಕೃಷ್ಣೇಗೌಡ, ನರಸೇಗೌಡ, ದಿವಾಕರ್, ಪುಟ್ಟರಾಜು, ವೆಂಕಟೇಶ್, ಸಿ.ಕೆ.ಮೂರ್ತಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.