ತೊಂಡಿಗನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನರು.
ಅರಸಿಕೆರೆ ಗ್ರಾಮಾಂತರ: ತಾಲೂಕಿನ ಬಾಣವರ ಹೋಬಳಿ ತೊಂಡಿಗನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು.
ಶ್ರೀರಾಮನವಮಿಯಂದು ಪ್ರಾರಂಭವಾದ ಜಾತ್ರೆ ವಿಧಿ ವಿಧಾನಗಳು ಸಂಪನ್ನಗೊಂಡವು. ನಿತ್ಯ ಅಭಿಷೇಕ, ಹೋಮ, ಪೂಜೆಗಳು ನಡೆದವು. ಗ್ರಾಮದ ಪ್ರಮುಖ ಬೀದಿಯಲ್ಲಿ ಉತ್ಸವ ನಡೆಯಿತು. ಕೆಂಗುರ ಹಟ್ಟಿ, ಹೆಂಗುರಹಟ್ಟಿ, ಕೋಡಿಹಳ್ಳಿ, ಹನುಮನಹಳ್ಳಿ ಹಾಗೂ ತೊಂಡಿಗನಹಳ್ಳಿ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕರಿಗೆ ಪಾನಕ, ಫಲಾಹಾರ, ಪ್ರಸಾದ ವಿನಿಯೋಗ ಮಾಡಲಾಯಿತು.