ಆಲೂರು ತಾಲೂಕಿನ ಧರ್ಮಪುರಿ ಗ್ರಾಮದಲ್ಲಿ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆಸುತ್ತಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಆಲೂರು ಸರ್ಕಾರಿ ಆಸ್ಪತ್ರೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಸ್.ಸತೀಶ್ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಕ ರಾಜು, ಆರೋಗ್ಯ ನಿರೀಕ್ಷಕ ಮಂಜು, ಐಸಿಟಿಸಿ ಆಪ್ತ ಸಮಾಲೋಚಕಿ ಗೌರಿ ಮತ್ತಿತರರಿದ್ದರು.
ಆಲೂರು: ಒತ್ತಡದ ಜೀವನದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಉಚಿತ ಆರೋಗ್ಯ ತಪಾಸಣಾ ಶಿಬಿರ ವರದಾನವಾಗಿದೆ ಎಂದು ಆಲೂರು ಸರ್ಕಾರಿ ಆಸ್ಪತ್ರೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಸ್.ಸತೀಶ್ ತಿಳಿಸಿದರು.
ತಾಲೂಕಿನ ಧರ್ಮಪುರಿ ಗ್ರಾಮದಲ್ಲಿ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆಸುತ್ತಿರುವ ವಿಶೇಷ ವಾರ್ಷಿಕ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಆರೋಗ್ಯ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಬದಲಾದ ಜೀವನ ಶೈಲಿಯಿಂದ ಚಿಕ್ಕ ಚಿಕ್ಕ ಮಕ್ಕಳಲ್ಲಿ ರಕ್ತದೊತ್ತಡ, ಮಧುಮೇಹ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಹೀಗಾಗಿ ಕಾಲ ಕಾಲಕ್ಕೆ ಪರೀಕ್ಷೆಗಳಿಗೆ ಒಳಗಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಸರಿಯಾದ ಆಹಾರ ಮತ್ತು ವ್ಯಾಯಾಮ ಪದ್ಧತಿಯಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ದೈಹಿಕ, ಮಾನಸಿಕ, ಸಾಮಾಜಿಕ ಸದೃಢತೆಯನ್ನು ಆರೋಗ್ಯವೆಂದು ಕರೆಯಲಾಗುತ್ತದೆ. ರೋಗಗಳಲ್ಲಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ಎಂಬ ರೋಗಗಳಿವೆ. ಅಸಾಂಕ್ರಾಮಿಕ ರೋಗಗಳು ಸಂಪೂರ್ಣ ವಾಸಿಯಾಗುವುದಿಲ್ಲ. ಅವುಗಳನ್ನು ನಿಯಂತ್ರಣದಲ್ಲಿಟ್ಟುಬೇಕು ಎಂದು ತಿಳಿಸಿ, ಎಚ್‌ಪಿವಿ ಲಸಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ರಾಜು, ಆರೋಗ್ಯ ನಿರೀಕ್ಷಕ ಮಂಜು, ಐಸಿಟಿಸಿ ಆಪ್ತ ಸಮಾಲೋಚಕಿ ಗೌರಿ, ಎನ್‌ಸಿಡಿ ಸಮಾಲೋಚಕ ರವಿ, ಪ್ರಯೋಗಾಲಯ ತಂತ್ರಜ್ಞರಾದ ಸುಮಿತ್ರಾ, ಸುಪ್ರಿಯಾ, ಆಶಾ ಕಾರ್ಯಕರ್ತರಾದ ನೇತ್ರಾವತಿ, ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಟಿ.ಕೆ.ಶ್ರೀನಿವಾಸ, ಶಿಬಿರಾಧಿಕಾರಿ ಡಾ.ಪಿ.ಕೆ.ರಾಘವೇಂದ್ರ, ಉಪನ್ಯಾಸಕರಾದ ರಶ್ಮಿತಾ, ಭವ್ಯಾ, ಕಾಲೇಜು ಸಿಬ್ಬಂದಿ, ಧರ್ಮಪುರಿ ಗ್ರಾಮಸ್ಥರು ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರರು ಹಾಜರಿದ್ದರು.