ಉರಗ ರಕ್ಷಕ ಸ್ನೇಕ್ ಬಾಬು ಅವರು ಸೆರೆಹಿಡಿದ ಹಾವನ್ನು ಪ್ರದರ್ಶಿಸಿದರು.
ಆಲೂರು: ತಾಲೂಕಿನ ಹೊನ್ನೇನಹಳ್ಳಿ ಶಾಲೆಯ ಕ್ರೀಡಾ ಕೊಠಡಿಯಲ್ಲಿದ್ದ ಭಾರಿ ಗಾತ್ರದ ನಾಗರಹಾವನ್ನು ಉರಗ ರಕ್ಷಕ ಸ್ನೇಕ್ ಬಾಬು ಅವರು ಸುರಕ್ಷಿತವಾಗಿ ಸೆರೆಹಿಡಿದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಆತಂಕ ದೂರಮಾಡಿದರು.
ಶಾಲೆಯ ಸಿಬ್ಬಂದಿ ಕ್ರೀಡಾ ಕೊಠಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡು ಆತಂಕಗೊಂಡ ಸಿಬ್ಬಂದಿ, ಕೂಡಲೇ ಮುಖ್ಯಶಿಕ್ಷಕಿ ಪೂರ್ಣಿಮಾ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅವರು, ಸ್ನೇಕ್ ಬಾಬು ಅವರಿಗೆ ಕರೆ ಮಾಡಿದ್ದರಿಂದ ಸ್ಥಳಕ್ಕೆ ಬಂಧ ಸ್ನೇಕ್ ಬಾಬು, ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಶಾಲಾ ಆವರಣದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.