ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು. ಪ್ರೊ.ರೋಮನ್ ಸೆಂಕರಿಕ್, ಡಾ.ಚನ್ನಿಗಪ್ಪ ಮುಂಜಂದಿರ, ಡಾ.ರಚನಾ ರಾಜೀವ್, ಡಾ.ರತ್ನರಾಜೀವ್, ರಂಜಿತ್ ರಾಜೀವ್, ಡಾ.ಪಿ.ಕೆ.ಮಹೇಶ್ ಇತರರಿದ್ದರು.
- ಭವಿಷ್ಯದಲ್ಲಿ ಎಐ ಪಾತ್ರ ಹೆಚ್ಚು
- ಪ್ರೊ.ರೋಮನ್ ಸೆಂಕರಿಕ್ ಹೇಳಿಕೆ
ಹಾಸನ: ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಎಐ ಪಾತ್ರ ಬಹಳ ಮಹತ್ತರವಾಗಿರುತ್ತದೆ ಎಂದು ಜೆಕ್ ರಿಪಬ್ಲಿಕ್ ದೇಶದ ಜ್ಲಿನ್ ನಗರದ ಥಾಮಸ್ ಬಾಟ ವಿಶ್ವವಿದ್ಯಾಲಯದ ಎಐ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಪ್ರೊ.ರೋಮನ್ ಸೆಂಕರಿಕ್ ಹೇಳಿದರು.
ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ‘ಐಇಅಐಉಖ 2025’ ಶೀರ್ಷಿಕೆಯಡಿ ಇಂಜಿನಿಯರಿಂಗ್ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪಾತ್ರ ಎಂಬ ವಿಷಯದ ಮೇಲೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅತಿಥಿಯಾಗಿ ಮಾತನಾಡಿದರು.
ಎಐ ಎಂಬುದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಸ್ಥಾನ ಪಡೆಯಲಿದೆ. ಹಾಗಾಗಿ ಎಲ್ಲರೂ ಎಐ ವಿಷಯ ಜ್ಞಾನ ಪಡೆಯಬೇಕೆಂದು ಹೇಳಿದರು.
ಐಇಇಇ ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ.ಚನ್ನಿಗಪ್ಪ ಮುಂಜಂದಿರ ಮಾತನಾಡಿ, ರಾಜೀವ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ವಿದ್ಯಾರ್ಥಿ ಘಟಕವನ್ನು ಸ್ಥಾಪಿಸಿ ಆ ಮೂಲಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಬಂಧಗಳ ಮಂಡನೆಗೆ ಅವಕಾಶ ಕಲ್ಪಿಸಿಕೊಟ್ಟು, ತಮ್ಮ ಜ್ಞಾನ ವೃದ್ಧಿಯ ಜತೆಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಸಮ್ಮೇಳನಕ್ಕೆ ಒಟ್ಟು 1,225 ಪ್ರಬಂಧಗಳು ಬಂದಿದ್ದು, ಇದರಲ್ಲಿ 505 ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಆಯ್ದ ಕೆಲ ಪ್ರಬಂಧಗಳು ಅಂತಾರಾಷ್ಟ್ರೀಯ ನಿಯತಕಾಲಿಕಗಳಾದ ಸ್ಪ್ರಿಂಜರ್, ಅಪ್ಲೈಡ್ ಮ್ಯಾಥಮೆಟಿಕ್ಸ್, ಮಾಡಲಿಂಗ್ ಆ್ಯಂಡ್ ಸಿಮುಲೇಷನ್, ಕಾಂಪಿಟೇಷನ್ ಇಂಟಲಿಜೆನ್ಸ್ ಸಿಸ್ಟಮ್ ಮತ್ತು ರಿನೀವೆಬಲ್ ಎನರ್ಜಿ ರಿಸರ್ಚ್‌ನಲ್ಲಿ ಪ್ರಕಟಗೊಳ್ಳಲಿವೆ ಎಂದು ತಿಳಿಸಿದರು.
ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ರಚನಾ ರಾಜೀವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ರತ್ನರಾಜೀವ್, ಉಪಾಧ್ಯಕ್ಷ ರಂಜಿತ್ ರಾಜೀವ್, ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಕೆ.ಮಹೇಶ್, ಅಕಾಡೆಮಿಕ್ ಡೀನ್ ಡಾ.ರಾಮಮೂರ್ತಿ, ಡಾ.ಚಂದ್ರಬಾಬು ನಾಯ್ಡು, ಎಲ್ಲ ವಿಭಾಗದ ಡೀನ್‌ಗಳು, ಮುಖ್ಯಸ್ಥರು, ಬೊಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.