ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು . ಡಾ.ಶ್ರೀವತ್ಸ ಎಸ್.ವಟಿ, ಎ.ಬಿ.ಪ್ರಕಾಶ್, ಸೋಮಶೇಖರ್, ಸಂದೀಪ್, ಅಶ್ವತ್, ನವೀನ್ ಇದ್ದರು. 
ಹಾಸನ

ಛಾಯಾಗ್ರಾಹಕರ ವೃತ್ತಿ ಕಸಿಯುತ್ತಿದೆ ಎಐ

ಬೇಲೂರು:

ಎಐ ತಂತ್ರಜ್ಞಾನ ಹಾಗೂ ಇವೆಂಟ್ ಮ್ಯಾನೆಂಜ್‌ಮೆಂಟ್‌ಗಳು ಛಾಯಾಗ್ರಾಹಕರ ವೃತ್ತಿಯನ್ನು ಕಸಿಯುತ್ತಿವೆ ಎಂದು ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು(ಸ್ವಾಮಿ) ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಕ್ಯಾಮರಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಛಾಯಾ ಗ್ರಾಹಕ ವೃತ್ತಿ ಜೀವನ ಕಷ್ಟಕರವಾಗುತ್ತಿದ್ದು, ನಮ್ಮ ಅಸ್ತಿತ್ವಕ್ಕಾಗಿ ರಾಜ್ಯದ್ಯಂತ ಹೋರಾಟ ನಡೆಸುವ ಅನಿವಾರ್ಯತೆ ಬಂದೊದಗಿದೆ. ನಮ್ಮ ಸಂಘಟನೆಯನ್ನು ಬಲ ಪಡಿಸಬೇಕಿದ್ದು, ಪ್ರತಿ ಛಾಯಾಗ್ರಾಹಕರು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು. ಜತೆಗೆ ಸಂಘದ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು.
ಆಸರೆ ಯೋಜನೆ ಛಾಯಾಗ್ರಾಹಕರಿಗೆ ಬಾಂಡ್ ವಿತರಿಸಿ ಮಾತನಾಡಿದ ರಾಜ್ಯ ಛಾಯಾಗ್ರಾಹಕರ ಸಂಘದ ನಿರ್ದೇಶಕ ಕೋನೆರಿ ಸೂರಿ, ಛಾಯಾಗ್ರಾಹಕರು ಮರಣ ಹೊಂದಿದ್ದ ಸಂದರ್ಭ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲು ರಾಜ್ಯ ಸಂಘವು ಆಸರೆ ಯೋಜನೆಯನ್ನು ಜಾರಿಗೆ ತಂದಿದ್ದು, ಬಾಂಡ್‌ಗಳನ್ನು ರಾಜ್ಯದಲ್ಲೇ ಪ್ರಥಮವಾಗಿ ಬೇಲೂರಿನಲ್ಲಿ ವಿತರಿಸಲಾಗುತಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸದಸ್ಯರ ಸಹಕಾರದಿಂದ ಮುಂದಿನ ದಿನಗಳಲ್ಲಿ, ಛಾಯಾಗ್ರಾಹಕರಿಗಾಗಿ ವಿವಿಧ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಜಿಲ್ಲಾ ಸಹಕಾರ್ಯದರ್ಶಿ ಮಲ್ಲೇಶ್ ಮಾತನಾಡಿದರು.
ಸಂಘದ ತಾಲೂಕು ಗೌರವಾಧ್ಯಕ್ಷ ಡಾ.ಶ್ರೀವತ್ಸ ಎಸ್.ವಟಿ, ಮಾಜಿ ಅಧ್ಯಕ್ಷ ಎ.ಬಿ.ಪ್ರಕಾಶ್, ಉಪಾಧ್ಯಕ್ಷ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಸಂದೀಪ್, ಕಾರ್ಯದರ್ಶಿ ಅಶ್ವತ್, ಖಜಾಂಚಿ ನವೀನ್, ಸಂಘಟನಾ ಕಾರ್ಯದರ್ಶಿ ಪ್ರಭುರಾವ್, ನಿರ್ದೇಶಕರಾದ ಸತೀಶ್, ಸುನೀಲ್, ರವಿಕುಮಾರ್, ಬಸವರಾಜು, ಬಿ.ಪಿ.ಮಧು, ಮೂರ್ತಿ, ನಿಕಾನ್ ಕ್ಯಾಮರಾ ಮಾರಾಟ ವ್ಯವಸ್ಥಾಪಕ ಮಹೇಶ್, ಕಾರ್ಯಗಾರ ವ್ಯವಸ್ಥಾಪಕ ಸಿ.ಟಿ.ಸ್ಟೇರಿನ ಇತರರಿದ್ದರು.