ಅರಕಲಗೂಡು ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿವ ಅಕ್ಕ ಮಹಾದೇವಿ ಜಯಂತಿ ಅಚರಿಸಲಾಯಿತು. ಕುಮಾರಸ್ವಾಮಿ, ಲೋಕಮಾತಾ, ದಾಕ್ಷಾಯಿಣಿ, ಅಂಬಿಕಾ ಇತರರಿದ್ದರು. 
ಹಾಸನ

ಅಕ್ಕಮಹಾದೇವಿ ತತ್ವಗಳನ್ನು ಅಳವಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಮಾರಸ್ವಾಮಿ ಸಲಹೆ
ಅರಕಲಗೂಡು : ತಾಲೂಕಿನ ಬಸವಾಪಟ್ಟಣ ಗ್ರಾಮದಲ್ಲಿರುವ ಅಕ್ಕಮಹಾದೇವಿ ಬಳಗದ ವತಿಯಿಂದ ಇತ್ತೀಚೆಗೆ ಅಕ್ಕಮಹಾದೇವಿ ಜಯಂತಿ ಅಚರಿಸಲಾಯಿತು.
ಊರಿನ ಮಹಾದೇವಿ ದೇವಾಲಯದಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಮಾರಸ್ವಾಮಿ ವಚನ ಪುಸ್ತಕ ನೀಡಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ಶಿವಶರಣೆ ಅಕ್ಕಮಹಾದೇವಿ ಅವರ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಮನ ಸಲ್ಲಿಸಿದಂತಾಗುತ್ತದೆ. ಎಲ್ಲ ಶಿವಶರಣರಂತೆ ನಿಸ್ವಾರ್ಥ, ಸ್ವಾವಲಂಬಿ ಸ್ತ್ರೀ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು ಎಂದರು.
ಅಕ್ಕನ ಬಳಗದ ಅಧ್ಯಕ್ಷೆ ಲೋಕಮಾತಾ ಮಲ್ಲಪ್ಪ, ಕಾರ್ಯದರ್ಶಿ ದಾಕ್ಷಾಯಣಿ ಮಹದೇವ್, ಖಜಾಂಚಿ ಅಂಬಿಕಾ ವಾಗೀಶ್, ಸದಸ್ಯರಾದ ಪ್ರಭಾವತಿ ನಂಜುಂಡಸ್ವಾಮಿ, ಸ್ಮಿತಾ ಬಾಬು, ಅನಿತಾ ಶ್ರೀಧರ್, ವಾಣಿ ಪ್ರಭು, ಹರ್ಷ ಬಸವಣ್ಣ, ಶುಭಾ ವಿರೂಪಾಕ್ಷ, ನಂದಿನಿ ಪರಮೇಶ್, ಉಷಾ ಸುಧಾಕರ್, ಲತಾ ಜಯಶಂಕರ್, ರಕ್ಷಿತಾ ಸುಕೇಶ್, ಜ್ಯೋತಿನಾಗರಾಜ್, ಶೋಭಾ ನಂದಕುಮಾರ್, ಸುಮಾ ಅಂಬರೀಷ್, ಮಾದವಿ ಲೋಕೇಶ್, ರೂಪಾ ದಿನೇಶ್, ಶುಭಾ ರುದ್ರಶೆಟ್ಟಿ, ಶಶಿಕಲಾ ಪ್ರಕಾಶ್, ಪೂರ್ಣಿಮಾ ವೀರೇಶ್, ಶುಭಾ ರವಿಕುಮಾರ್ ಇತರರು ಇದ್ದರು.
ದೇವಾಲಯ ಪುರೋಹಿತರಾದ ವೇ.ಸಿ.ಎಂ.ನಾಗರಾಜಶಾಸ್ತ್ರಿ ಪೂಜಾ ಕೈಂಕರ್ಯ ನೆರವೇರಿಸಿದರು. ಅಲಂಕೃತ ಎತ್ತಿನ ಬಂಡಿಯಲ್ಲಿ ಅಕ್ಕಮಹಾದೇವಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.