ಹಾಸನದ ಪಾಂಡಿತ್ಯ ಯೂರೋ ಶಾಲೆಯಲ್ಲಿ ಆಯೋಜಿಸಿದ್ದ ಐಸಿಎಸ್‌ಇ ಹಾಸನ ವಿಭಾಗ ಮಟ್ಟದ ಮ್ಯಾಥಮೆಟಿಕ್ಸ್ (ಗಣಿತ) ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಮಕ್ಕಳು.  
ಹಾಸನ

ಮಕ್ಕಳಿಗೆ ಚುಟುವಟಿಕೆ ಆಧಾರಿತ ಗಣಿತ ಶಿಕ್ಷಣ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಪಾಂಡಿತ್ಯ ಯೂರೋ ಶಾಲೆಯಲ್ಲಿ ಕಾರ್ಯಾಗಾರ

ಹಾಸನ: ಪಾಂಡಿತ್ಯ ಯೂರೋ ಶಾಲೆಯಲ್ಲಿ ಐಸಿಎಸ್‌ಇ ಹಾಸನ ವಿಭಾಗಮಟ್ಟದ ಮ್ಯಾಥಮೆಟಿಕ್ಸ್ (ಗಣಿತ) ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿ ನಿರ್ಮಲಾ ಶಾಸ್ತ್ರಿ, ಸುಮಾರು ನಾಲ್ಕು ಗಂಟೆ ಕಾಲ ಗಣಿತ ವಿಷಯದಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣವನ್ನು ಮಕ್ಕಳಿಗೆ ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ಸುಲಲಿತವಾಗಿ ತಿಳಿಸಿಕೊಟ್ಟರು.

ಐಸಿಎಸ್‌ಇ ಹಾಸನ ವಿಭಾಗ ಮಟ್ಟದ ಸಂಚಾಲಕರು ಹಾಗೂ ಶಾಲೆಯ ಪ್ರಾಂಶುಪಾಲ ಡಾ. ವಿಶ್ವನಾಥ್ ಬಿ.ಕೋಳಿವಾಡ, ವಿದ್ಯಾಸೌಧ ಶಾಲೆಯ ಪ್ರಾಂಶುಪಾಲ ಪರಮೇಶ್ ಅವರು ಮತ್ತು ಬೋಧಕ ಹಾಗೂ ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು.