ತಾಲೂಕಿನ ಕಸಬಾ ಹೋಬಳಿ ದಿಂಡಗೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಚಿರತೆ ಸರಿಯಾಗಿರುವುದು.  
ಹಾಸನ

ಕೋಳಿ ಬೇಟೆಯಾಡುತ್ತಿದ್ದ ಚಿರತೆ ಸೆರೆ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಬೋನಿನಲ್ಲಿ ಮೂರು ವರ್ಷದ ಗಂಡು ಚಿರತೆ ಸೆರೆ
ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಗ್ರಾಮದ ತೋಟದಲ್ಲಿ ಇರಿಸಿದ್ದ ಬೋನಿನಲ್ಲಿ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ.
ಗ್ರಾಮದ ಆನಂದ್ ಅವರ ತೋಟದ ಮನೆಯಲ್ಲಿ ಕೋಳಿ ಸಾಕಣೆ ಮಾಡಲಾಗುತ್ತಿತ್ತು. ಆದರೆ, ಚಿರತೆ ಪದೇ ಪದೆ ಬಂದು ಕೋಳಿಗಳ ಮೇಲೆ ದಾಳಿ ಮಾಡುತ್ತಿತ್ತು. ಚಿರತೆ ಹಾವಳಿಯಿಂದ ಬೇಸತ್ತ ಆನಂದ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.
ಮೂರು ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಸ್ಥಳ ಗುರುತಿಸಿ ಬೋನು ಅಳವಡಿಸಿದ್ದರು. ಬುಧವಾರ ಮಧ್ಯರಾತ್ರಿ ಕೋಳಿಗಳ ಮೇಲೆ ದಾಳಿ ಮಾಡಲು ಆಗಮಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಬೋನಿಗೆ ಸಿಲುಕಿದ್ದ ಚಿರತೆಯನ್ನು ಬೆಲಸಿಂದ ಸಸ್ಯಕ್ಷೇತ್ರಕ್ಕೆ ಸಾಗಿಸಲಾಗಿದ್ದು ಆರೋಗ್ಯ ತಪಾಸಣೆ ನಂತರ ಅರಣ್ಯಕ್ಕೆ ಬಿಡುವುದಾಗಿ ಅರಣ್ಯಾಧಿಕಾರಿ ಖಲಂದರ್ ತಿಳಿಸಿದ್ದಾರೆ.