ಎತ್ತಿನಹೊಳೆ ಪೈಪ್ ಸ್ಫೋಟಗೊಂಡ ಪರಿಣಾಮ ನೀರು ಕಾರಂಜಿಯಂತೆ ಚಿಮ್ಮುತ್ತಿರುವುದು.
ಸಕಲೇಶಪುರ: ತಾಲೂಕಿನ ಹಲಸುಲಿಗೆ ಗ್ರಾಮ ಸಮೀಪ ಭಾನುವಾರ ಮುಂಜಾನೆ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಒಡೆದು ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗಿದೆ.
ಬೆಳಗ್ಗೆ 8ಗಂಟೆಯ ವೇಳೆ ನೀರು ಹರಿಸಲಾಗಿದ್ದು, ಮುಖ್ಯಕೇಂದ್ರದಿಂದ ಕೇವಲ ಐದು ಕಿ.ಮೀ. ದೂರದ ಹಲಸುಲಿಗೆ ಗ್ರಾಮ ಸಮೀಪ 8.30ರ ವೇಳೆ ಬಾರಿ ಶಬ್ದದೊಂದಿಗೆ ಪೈಪ್‌ಲೈನ್ ಸ್ಫೋಟಗೊಂಡ ಪರಿಣಾಮ ಚಿಲುಮೆಯ ರೂಪದಲ್ಲಿ ಸುಮಾರು ನೂರು ಅಡಿಯಷ್ಟು ನೀರು ಮೇಲೆ ಚಿಮ್ಮಿದೆ. ಪೈಪ್‌ಲೈನ್ ಸ್ಫೋಟ ಸಂಭವಿಸಿದ ತಕ್ಷಣ, ನೀರು ಹರಿಯುವುದನ್ನು ಸ್ಥಗಿತಗೊಳಿಸಲಾಯಿತು. ಆದರೂ ಸುಮಾರು ಮೂರು ಗಂಟೆಗಳ ಕಾಲ ನೀರು ವ್ಯರ್ಥವಾಗಿ ಹರಿದು ಸಮೀಪದ ಕಾಫಿತೋಟ ಹಾಗೂ ಗದ್ದೆಗಳಿಗೆ ನುಗ್ಗಿದ ಪರಿಣಾಮ ಹಾನಿ ಸಂಭವಿಸಿದೆ.
ಮೂರು ಸಾವಿರ ಕ್ಯೂಸೆಕ್ ನೀರು ಹರಿಯುವ ಸಾಮರ್ಥ್ಯ ಹೊಂದಿರುವ ಪೈಪ್‌ನಲ್ಲಿ, ಸದ್ಯ 250 ಕ್ಯೂಸೆಕ್ ನೀರು ಮಾತ್ರ ಹರಿಬಿಡಲಾಗುತ್ತಿದೆ. ಈ ಅಲ್ಪ ನೀರು ಹರಿಯುವ ವೇಳೆ ಪೈಪ್ ಸೊ್ಫೀೀಟಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.