ಶ್ರೀಸತ್ಯಸಾಯಿ ಬಾಬಾ ಅವರ 100ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯೂ ಶ್ರೀಚನ್ನಕೇಶವಸ್ವಾಮಿ ದೇಗುಲದ ಸಮೀಪ ಆಗಮಿಸಿತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಇತರರು ಇದ್ದರು.  
ಹಾಸನ

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಕ್ಕೆ ಅದ್ದೂರಿ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • Sri Sathya Sai Baba
ಬೇಲೂರು: ಶ್ರೀ ಸತ್ಯಸಾಯಿ ಬಾಬಾ ಅವರ 100ನೇ ಜನ ್ಮ ವಾರ್ಷಿಕೋತ್ಸವದ ಪ್ರಯುಕ್ತ ದೇಶಾದ್ಯಂತ ಸಂಚರಿಸುತ್ತಿರುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯೂ ಬುಧವಾರ ತಾಲೂಕಿಗೆ ಆಗಮಿಸಿದ ಸಂದರ್ಭ ಸಾವಿರಾರು ಜನರು ಸ್ವಾಗತಿಸಿ, ವೀರಗಾಸೆ, ಚಂಡೆ ವಾದ್ಯದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ಪದ್ಮನಾಭ ಪೈ ಮಾತನಾಡಿ, ದೇಶಾದ್ಯಂತ ಐದು ಪ್ರೇಮ ಪ್ರವಾಹಿನಿ ರಥಗಳು ಸಂಚರಿಸುತ್ತಿದ್ದು, ಅವುಗಳಲ್ಲಿ ಒಂದು ರಥ ಬೇಲೂರಿಗೆ ಬಂದಿದೆ. ಭಕ್ತರ ಉತ್ಸಾಹ ಹಾಗೂ ಭಾವನಾತ್ಮಕ ಸ್ವಾಗತ ಸಂತೋಷ ತಂದಿದೆ ಎಂದರು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಹಾಸನ ಜಿಲ್ಲಾ ಉಪಾಧ್ಯಕ್ಷ ಹಾಗೂ ಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಇಂದ್ರೇಶ್ ಮಾತನಾಡಿ, ಸುಮಾರು 1,200ಕ್ಕೂ ಹೆಚ್ಚು ಭಕ್ತರು ರಥಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಭಾಗ್ಯ ಎಂದು ತಿಳಿಸಿದರು.
ರಥಯಾತ್ರೆಯ ನಂತರ ಪಟ್ಟಣದ ಆರ್ವಿ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ನವಿಲಹಳ್ಳಿಯ ಸತ್ಯಸಾಯಿ ಮಂದಿರ, ಅಗ್ಗಡಲು ಸತ್ಯಸಾಯಿ ಮಂದಿರದಲ್ಲಿ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳು ಜರುಗಿದವು. ಸುಮಾರು 600 ಜನರಿಗೆ ನಾರಾಯಣ ಸೇವೆ ಹಾಗೂ 100ಕ್ಕೂ ಹೆಚ್ಚು ಜನರಿಗೆ ಹೊಸ ವಸ್ತ್ರ ವಿತರಿಸಲಾಯಿತು. ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾ ಪೈ, ಜಿಲ್ಲಾಧ್ಯಕ್ಷ ಡಾ.ನಾಗರಾಜ್, ತಾಲೂಕು ಸಂಚಾಲಕರಾದ ರುದ್ರೇಗೌಡ, ಬಾಳೆಹಣ್ಣು ರಮೇಶ್ ಇತರರಿದ್ದರು.
ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಆರಂಭಗೊಂಡ ಶ್ರೀಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯೂ ಶಿವಮೊಗ್ಗ-ಚಿಕ್ಕಮಗಳೂರು ಮಾರ್ಗವಾಗಿ ದೇಶದಾದ್ಯಂತ ಸುಮಾರು 50,000 ಗ್ರಾಮಗಳನ್ನು ಸಂಚರಿಸಿ 3,50,000 ಕಿ.ಮೀ. ಯಾತ್ರೆಯನ್ನು ರಥವು ಪೂರ್ಣಗೊಳಿಸಿದೆ.