ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತರಾದ ದಾಸರಕೊಪ್ಪಲು ಗ್ರಾಮದ ಸಣ್ಣೇಗೌಡ ಅವರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.  
ಹಾಸನ

ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ
  • ಹಾಸನದ ಸುಬೇದಾರ್ ವೃತ್ತದಿಂದ ದಾಸರಕೊಪ್ಪಲು ಗ್ರಾಮದವರೆಗೆ ಮೆರವಣಿಗೆ

ಹಾಸನ: ಇಲ್ಲಿನ ದಾಸರ ಕೊಪ್ಪಲು ಗ್ರಾಮದ ಲೀಲಾವತಿ ಮತ್ತು ಸತ್ಯನಾರಾಯಣ ಅವರ ದ್ವಿತೀಯ ಪುತ್ರ ಸಣ್ಣೇಗೌಡ (ಪುನೀತ್) ರವರು 20 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತರಾಗಿದ್ದಾರೆ.

ಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಮಂಗಳವಾರ ರಾತ್ರಿ ಹಾಸನದ ಸುಬೇದಾರ್ ವೃತ್ತದಿಂದ ದಾಸರಕೊಪ್ಪಲು ಗ್ರಾಮದವರೆಗೆ ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು. ದಾಸರಕೊಪ್ಪಲು ಗ್ರಾಮದಲ್ಲಿ ಸಣ್ಣೇಗೌಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದ ಸುಜಯ್ ಕುಮಾರ್ ಮಾತನಾಡಿ, 20 ವರ್ಷಗಳನ್ನು ದೇಶ ಸೇವೆಗೆ ಮೀಸಲಿಟ್ಟು ಹಿಂದಿರುಗಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಗ್ರಾಮದ ಯುವಕರು ಕೂಡ ಇವರ ಪ್ರೇರಣೆಯನ್ನು ತೆಗೆದುಕೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಗ್ರಾಮದ ಮನೋಹರ್ ಮಾತನಾಡಿ, ದೇಶ ಸೇವೆಯಲ್ಲಿ ತೊಡಗಿಸಿಕೊಂಡು ಹಿಂದಿರುಗಿರುವ ಪುನೀತ್ ಅವರು ನಮ್ಮೆಲ್ಲರಿಗೂ ಪ್ರೇರಣೆ ಗ್ರಾಮದ ಜನರು ಸದಾ ಅವರ ಜತೆ ಇರುವುದಾಗಿ ಹೇಳಿದರು.
ನಿವೃತ್ತ ಯೋಧ ಪುನೀತ್ ಮಾತನಾಡಿ, ಗ್ರಾಮದ ಜನರು ಗೌರವ ಸಲ್ಲಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಆನಂದ್, ಶರತ್, ಹರೀಶ್, ವರುಣ್, ಪುನೀತ್, ತ್ಯಾಗರಾಜ್ ಇತರರಿದ್ದರು.