ಆಲೂರು ತಾಲೂಕಿನ ರಾಯರ ಕೊಪ್ಪಲು ರಸ್ತೆಯ ವೈ.ಎನ್.ಪುರ ಗ್ರಾಮದಲ್ಲಿ ಬನಶಂಕರಿದೇವಿಯ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
- ಮಗ್ಗೆ ರಾಯ್ರ ಕೊಪ್ಪಲು ರಸ್ತೆಯ ವೈ.ಎನ್.ಪುರ ಗ್ರಾಮ
- ಶ್ರೀ ಬನಶಂಕರಿದೇವಿಯ 10ನೇ ಜಾತ್ರಾ ಮಹೋತ್ಸವ
ಆಲೂರು: ತಾಲೂಕಿನ ಮಗ್ಗೆ ರಾಯ್ರ ಕೊಪ್ಪಲು ರಸ್ತೆಯ ವೈ.ಎನ್.ಪುರ ಗ್ರಾಮದಲ್ಲಿ ಶ್ರೀ ಬನಶಂಕರಿದೇವಿಯ 10ನೇ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವವು ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ರಥಕ್ಕೆ ಭಕ್ತರು ಬಾಳೆಹಣ್ಣು ಮತ್ತು ಉತ್ತತ್ತಿ ಹೂ, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಆ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಬನಶಂಕರಿ ದೇವಾಲಯದ ಭಾವಸಾರ ಕ್ಷತ್ರಿಯ ಮಂಡಳಿ ವತಿಯಿಂದ ಡಿ.28ರಂದು ಧ್ವಜಾರೋಹಣ ನೆರವೇರಿಸಲಾಗಿತ್ತು. 29 ರಂದು ಅಮ್ಮನವರಿಗೆ ವಿಶೇಷ ಅಭಿಷೇಕ, 30ರಂದು ಗೋಪೂಜೆ, ಗಂಗಾಪೂಜೆ, ಮೂಲ ದೇವರ ಅನುಜ್ಞೆ ಯಾಗಶಾಲೆ ಪ್ರವೇಶ, ಗಣಪತಿ ಪೂಜೆ, ಕಲಶ ಸ್ಥಾಪನೆ, ರಕ್ಷಾ ಬಂಧನ, ಋತ್ವಿಗ್ನರು, ಮೃತಿಕಾ, ಸಂಗ್ರಹ ಅಂಕಾರೋಹಣ, ಅಗ್ನಿ ಸ್ಥಾಪನೆ, ವಾಸ್ತು ಹೋಮ, ವಾಸ್ತು ಬಲಿ ನೆರವೇರಿತ್ತು. 31ರ ಂದು ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಜ 1ರಂದು ಗಿರಿಜಾಶಂಕರ ಕಲ್ಯಾಣೋತ್ಸವ, 2ರಂದು ದುರ್ಗಾದೀಶ ನಮಸ್ಕಾರ ನೆರವೇರಿತ್ತು.
ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪೂವಯ್ಯ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಶಶಿಧರ್, ಬಿಜೆಪಿ ಮುಖಂಡ ಲಿಖಿತ ಗೌಡ, ದೇವಾಲಯ ಟ್ರಸ್ಟ್ ಅಧ್ಯಕ್ಷೆ ಶಶಿಕಲಾ ಜ್ಞಾನೇಶ್ವರ ಇತರರು ಇದ್ದರು.