ಕಲ್ಲಹಳ್ಳಿ ಗ್ರಾಮ ಸಮೀಪ ರಸ್ತೆ ದಾಟುವಾಗ ಸಾಗಿದ್ದ ಕರುಗಳು 
ಹಾಸನ

ಕರುಗಳನ್ನು ಅಟ್ಟಾಡಿಸಿದ ಕಾಡಾನೆ ಮರಿ

ಪ್ರಮುಖ ಮುಖ್ಯಾಂಶಗಳು

  • baby elephant
ಸಕಲೇಶಪುರ: ತಾಲೂಕಿನ ಕಲ್ಲಹಳ್ಳಿ ಗ್ರಾಮ ಸಮೀಪ ಗುಂಪಿನಿಂದ ಬೇರ್ಪಟ್ಟಿದ್ದ ಕಾಡಾನೆ ಮರಿ ರಸ್ತೆ ದಾಟುವ ವೇಳೆ ಕರುಗಳನ್ನು ಅಟ್ಟಾಡಿಸಿದೆ.
ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟದತ್ತ ತೆರಳಲು ಕಾಡಾನೆ ಮರಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ನಾಲ್ಕೈದು ಕರುಗಳು ಸಾಗುತ್ತಿದ್ದವು. ಈ ವೇಳೆ ಮರಿಯಾನೆ ಘೀಳಿಡುತ್ತ ಕರುಗಳತ್ತ ಧಾವಿಸಿದ್ದು, ಬೆದರಿದ ಕರುಗಳು ಅಲ್ಲಿಂದ ಓಡಿ ಹೋಗಿವೆ. ಮರಿಯಾನೆ ಎರಡು ಬಾರಿ ಕರುಗಳನ್ನು ಅಟ್ಟಾಡಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಬಳಿಕ ಕಾಡಾನೆ ಮರಿ ತನ್ನ ಸೊಂಡಿಲಿನಿಂದ ಕಾಫಿ ತೋಟದ ಗೇಟ್ ತಳ್ಳಿ ಒಳ ಪ್ರವೇಶಿಸಿ ಕಾಫಿ ತೋಟದೊಳಗೆ ತೆರಳಿತು. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ಗ್ರಾಮಸ್ಥರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.