- ಲೋಕ ಅದಾಲತ್‌ನಲ್ಲಿ 6.18 ಲಕ್ಷ ಪ್ರಕರಣಗಳು ಇತ್ಯರ್ಥ
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾೀಶೆ ಹೇಮಾವತಿ ಮಾಹಿತಿ
- 72.44 ಲಕ್ಷ ರೂ. ವಸೂಲಿ
ಹಾಸನ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ 6,18,580 ಪ್ರಕರಣಗಳನ್ನು ಬಗೆಹರಿಸಿ, 72,44,18,606 ರೂ. ವಸೂಲಿ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾೀಶೆ ಹೇಮಾವತಿ ತಿಳಿಸಿದರು.
ಈ ವರ್ಷದಲ್ಲಿ ನಡೆಸಿದ ಮೊದಲ ರಾಷ್ಟ್ರೀಯ ಲೋಕ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಂಡಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರರು.
ಜಿಲ್ಲೆಯ 42 ನ್ಯಾಯಾಲಯಗಳ 95,402 ಪ್ರಕರಣಗಳ ಪೈಕಿ, ರಾಷ್ಟ್ರೀಯ ಲೋಕ ಅದಾಲತ್‌ಗಾಗಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 7,998 ಪ್ರಕರಣಗಳು ಹಾಗೂ 6,21,730 ವ್ಯಾಜ್ಯಪೂರ್ವ ಪ್ರಕರಣಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ 4,262 ಪ್ರಕರಣಗಳು ಹಾಗೂ 6,14,318 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಲೋಕ ಅದಾಲತ್‌ನಲ್ಲಿ 73 ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು, 285 ಚೆಕ್ ಬೌನ್ಸ್‌ಪ್ರಕರಣಗಳು, 142 ಬ್ಯಾಂಕ್ ರಿಕವರಿ ಪ್ರಕರಣಗಳು, 54 ವಿದ್ಯುತ್ ಕಾಯ್ದೆಯ ಪ್ರಕರಣಗಳು, 36 ಭೂಸ್ವಾೀನ ಪ್ರಕರಣಗಳು, 250 ಮೋಟರ್ ವಾಹನ ಪರಿಹಾರ ಪ್ರಕರಣಗಳು, 53 ಕೌಟುಂಬಿಕ ಪ್ರಕರಣಗಳು, 496 ಇತರ ಸಿವಿಲ್ ಪ್ರಕರಣಗಳು, 2,222 ಇತರ ಕ್ರಿಮಿನಲ್ ಪ್ರಕರಣಗಳು, ಆರು ಕಾರ್ಮಿಕ ಪ್ರಕರಣಗಳು, 645 ಜನನ ನೋಂದಣಿ ಪ್ರಕರಣಗಳು ಎಲ್ಲವೂ ಸೇರಿ ಒಟ್ಟು 4,262 ನ್ಯಾಯಾಲಯದ ಪ್ರಕರಣಗಳಾಗಿವೆ ಎಂದು ತಿಳಿಸಿದರು.
238 ವ್ಯಾಜ್ಯ ಪೂರ್ವ ಬ್ಯಾಂಕ್ ಸಾಲ ಮರುಪಾವತಿ ಪ್ರಕರಣಗಳು, 15,364 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, 2 ಗ್ರಾಹಕರ ನ್ಯಾಯಾಲಯದ ಪ್ರಕರಣಗಳು, 5,98,714 ನೀರಿನ ಮತ್ತು ಮನೆ ಕಂದಾಯದ ಪ್ರಕರಣಗಳು ಸೇರಿ 6,14,318 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಜಿಲ್ಲಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ನಡೆಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕಕ್ಷಿದಾರರಿಗೆ ಹಣ, ಸಮಯದ ಉಳಿತಾಯ ಆಗಿದ್ದು ಅನುಕೂಲವಾಗಿದೆ ಎಂದು ತಿಳಿಸಿದರು.