ಜಿಲ್ಲೆ

VIDEO| ಸಾರ್ವಜನಿಕರ ಎದುರೇ ರಾತ್ರೋರಾತ್ರಿ ಪ್ರೇಮಿಗಳು ಕಿತ್ತಾಟದ ವಿಡಿಯೋ ವೈರಲ್​!

ಹಾಸನ: ನಡುರಸ್ತೆಯಲ್ಲಿಯೇ ರಾತ್ರೋ ರಾತ್ರಿ ಪ್ರೇಮಿಗಳು ಕಿತ್ತಾಟ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ಸೋಮವಾರ ರಾತ್ರಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

ಹಾಸನದ ಆರ್​.ಸಿ. ರಸ್ತೆಯ ಸ್ವಾಗತ್​ ಪಾರ್ಟಿ ಹಾಲ್​ ಬಳಿ ಸಾರ್ವಜನಿಕರ ಎದುರೇ ಪ್ರೇಮಿಗಳು ಕಿತ್ತಾಡಿಕೊಂಡಿದ್ದಾರೆ. ಆದರೆ ಮತ್ತೊಬ್ಬ ಯುವಕನ ಪ್ರವೇಶದಿಂದ ಪ್ರಕರಣ ಗೊಂದಲು ಉಂಟುಮಾಡಿದೆ.

ಒಂದು ಹುಡುಗಿಗಾಗಿ ಇಬ್ಬರು ಕಿತ್ತಾಡಿಕೊಂಡಿದ್ದಾರೋ ಅಥವಾ ಪ್ರೇಮಿಗಳ ನಡುವೆಯೇ ಕಲಹ ಶುರುವಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸಾರ್ವಜನಿಕರು ಹಾಗೂ ಯುವತಿ ಗಲಾಟೆಯನ್ನು ಬಿಡಿಸಲು ಮುಂದಾದರೂ ಪರಸ್ಪರ ಕಿತ್ತಾಟ ಮಾಡಿಕೊಂಡಿದ್ದಾರೆ.

ದಾರಿಯಲ್ಲಿ ಸಾಗುತ್ತಿದ್ದ ಯಾರೋ ಒಬ್ಬರು ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)